CT Ravi On Eshwarappa: ಕೆ.ಎಸ್. ಈಶ್ವರಪ್ಪ ಹೆಸರು ಹೇಳುತ್ತಿದ್ದಂತೆ ನೋ ಕಮೆಂಟ್ಸ್‌ ಎಂದಿದ್ದೇಕೆ ಸಿ.ಟಿ.ರವಿ ?

ಪಕ್ಷ ನನಗೆ ಎಲ್ಲಿ ಕೆಲಸ ಮಾಡಲು ಹೇಳಿದೆಯೋ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಈಶ್ವರಪ್ಪ ಅವರ ಜೊತೆ ನಾನು ವೈಯಕ್ತಿಕವಾಗಿ ಮಾತನಾಡಿದ್ದೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಈಶ್ವರಪ್ಪ ಹೆಸರು ಹೇಳುತ್ತಿದ್ದಂತೆ ಸಿ.ಟಿ.ರವಿ(CT Ravi) ಅವರು ನೋ ‌ಕಮೆಂಟ್ಸ್ ಎಂದಿದ್ದಾರೆ. ಜೊತೆಗೆ ಮೋದಿ(Narendra Modi) ಫೋಟೋ ಬಳಕೆ ಬಗ್ಗೆಯೂ ಮತನಾಡಲು ನಿರಾಕರಿಸಿದ್ದಾರೆ. ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಅದಕ್ಕಾಗಿ ನಮ್ಮ ಹೆಸರನ್ನ ಪದೇ ಪದೇ ತೆಗೆದುಕೊಳ್ಳುತ್ತಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದಲ್ಲೇ ಇರಿ ಅಂತ ಈಶ್ವರಪ್ಪ(KS Eshwarappa) ಅವರಿಗೆ ಹೇಳಿದ್ದೇನೆ. ಮತ್ತೊಮ್ಮೆ‌ ಮೋದಿಗಾಗಿ, ಬಿಜೆಪಿಗಾಗಿ ಪಕ್ಷ ಮೀರಿದ ಕೆಲಸ ಮಾಡಬೇಡಿ ಅಂತ ಮನವಿ ‌ಮಾಡಿದ್ದೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

Related Video