Asianet Suvarna News Asianet Suvarna News

ಇನ್ನೂ ಒಂದು ವಾರ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಳಂಬ: ಡಿಕೆಶಿ ಒತ್ತಡಕ್ಕೆ ಮಣಿದು ರಾಹುಲ್ ಈ ಸೂಚನೆ ನೀಡಿದ್ರಾ..!

ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದ ಡಿಕೆಶಿ
ಡಿಕೆಶಿ ಒತ್ತಡಕ್ಕೆ ಮಣಿದು ರಾಹುಲ್ ಈ ಸೂಚನೆ ನೀಡಿದ್ರಾ..!
ಕಾರ್ಯಕರ್ತರಿಗೂ ಅವಕಾಶ ನೀಡಲಾಗುವುದು ಎಂದ ಡಿಸಿಎಂ

ಕಾಂಗ್ರೆಸ್‌ನಲ್ಲಿ ನಿಮಗ ಮಂಡಳಿ ಆಯ್ಕೆ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಇನ್ನೂ ಒಂದು ವಾರ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ(Corporation Board Chairman appointment) ವಿಳಂಬವಾಗುವ ಸಾಧ್ಯತೆ ಇದೆ. ದೆಹಲಿಗೆ(Delhi) ಹೋದ್ರು ನಿಗಮ ಮಂಡಳಿ ಪಟ್ಟಿ ಮಾತ್ರ ಕ್ಲೀಯರ್ ಆಗಿಲ್ಲ. ಮೊನ್ನೆ ರಾತ್ರಿ ಸಿದ್ದರಾಮಯ್ಯ(Siddaramaiah) ,ಡಿಕೆ ಶಿವಕುಮಾರ್‌,ಸುರ್ಜೇವಾಲಾ ಪಟ್ಟಿ ಫೈನಲ್‌ಗೆ ಸಭೆ ನಡೆಸಿದ್ದು, ಕೆಲ ಹೆಸರು ಸೇರಿಸಿ ಸಿದ್ದರಾಮಯ್ಯ, ಡಿಕೆಶಿ(DK shivakumar) ಪಟ್ಟಿ ರವಾನಿಸಿದ್ದರು. ಮೊದಲ ಲಿಸ್ಟ್‌ನಲ್ಲಿ ಶಾಸಕರಿಗೆ ನಿಗಮ ನೀಡಲು ಪ್ಲಾನ್ ಆಗಿತ್ತು. ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಬಳಿ ಸಿದ್ದರಾಮಯ್ಯ,ಡಿಕೆಶಿ ಚರ್ಚೆ ನಡೆಸಿದ್ದಾರೆ. ಶಾಸಕರ ಜೊತೆ ಕಾರ್ಯಕರ್ತರನ್ನೂ ಪರಿಗಣಿಸಿ ಎಂದ ರಾಹುಲ್. ಪೂರ್ಣ ಪ್ರಮಾಣದ ಪಟ್ಟಿ ರೆಡಿ ಮಾಡುವಂತೆ ರಾಹುಲ್ ಸೂಚನೆ ನೀಡಿದ್ದಾರಂತೆ. ರಾಹುಲ್ ಸೂಚನೆ ಬೆನ್ನಲ್ಲೇ ದೆಹಲಿಯಿಂದ ಸಿಎಂ,ಡಿಸಿಎಂ ವಾಪಸ್ ಆಗಿದ್ದು, ಶಾಸಕರು,ಕಾರ್ಯಕರ್ತರ ಒಟ್ಟಿಗೆ ಸೇರಿಸಿ ಪಟ್ಟಿ ಸಿದ್ಧಪಡಿಸಲು ಪ್ಲಾನ್ ಮಾಡಲಾಗಿದೆ. ವಾರದ ಬಳಿಕ ರಾಹುಲ್ ಜೊತೆ ಸಿಎಂ,ಡಿಸಿಎಂ ಚರ್ಚೆ ಮಾಡುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ:  ಇಂದು ಬಿಜೆಪಿ-ಜೆಡಿಎಸ್ ಮಹತ್ವದ ಸಭೆ: 5 ಕ್ಷೇತ್ರಗಳ ಪೈಕಿ 3 ಕ್ಷೇತ್ರ ಬಿಟ್ಟುಕೊಡಲು ಕಮಲ ಒಪ್ಪಿಗೆ?

Video Top Stories