Asianet Suvarna News Asianet Suvarna News

ಇಂದು ಬಿಜೆಪಿ-ಜೆಡಿಎಸ್ ಮಹತ್ವದ ಸಭೆ: 5 ಕ್ಷೇತ್ರಗಳ ಪೈಕಿ 3 ಕ್ಷೇತ್ರ ಬಿಟ್ಟುಕೊಡಲು ಕಮಲ ಒಪ್ಪಿಗೆ?

28 ಕ್ಷೇತ್ರಗಳ ಪೈಕಿ 5 ಕ್ಷೇತ್ರಕ್ಕೆ ಜೆಡಿಎಸ್ ನಾಯಕರ ಪಟ್ಟು
5 ಕ್ಷೇತ್ರಗಳ ಪೈಕಿ 3 ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ?
ಜೆಡಿಎಸ್ ಪ್ರಾಬಲ್ಯದ ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ಒಪ್ಪಿಗೆ?

ದೆಹಲಿಯಲ್ಲಿ ಇಂದು ಬಿಜೆಪಿ(BJP)-ಜೆಡಿಎಸ್(JDS) ಹೈವೋಲ್ಟೇಜ್ ಮೀಟಿಂಗ್ ನಡೆಯಲಿದ್ದು, ಲೋಕಸಭೆ(Loksabha) ಮೈತ್ರಿ ಕುರಿತಂತೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮೀಟಿಂಗ್‌ನಲ್ಲಿ ಚರ್ಚೆ ಮಾಡುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಜೊತೆ  ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ. ದೇವೇಗೌಡ(HD Devegowda) ಚರ್ಚೆ ನಡೆಸಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಇದ್ದಾರೆ. ವಿದೇಶ ಪ್ರವಾಸದಿಂದ ದೆಹಲಿಗೆ ಮಾಜಿ ಸಿಎಂ ಕುಮಾರಸ್ವಾಮಿ ಬಂದಿದ್ದಾರೆ. ಜೆಡಿಎಸ್‌ಗೆ ಎಷ್ಟು ಕ್ಷೇತ್ರವೆಂದು ಅಂತಿಮ ಮಾಡುವ ಸಾಧ್ಯತೆ. ಮೂರು ಕ್ಷೇತ್ರ ಬಿಟ್ಟುಕೊಡುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಇದ್ರೂ, ಆದ್ರೆ 5 ರಿಂದ 6 ಕ್ಷೇತ್ರ ಪಡೆಯುವ ಲೆಕ್ಕಾಚಾರದಲ್ಲಿ ಜೆಡಿಎಸ್ ನಾಯಕರು ಇದ್ದಾರೆ.ಇಂದು ಮೋದಿ ಜೊತೆ ಉಭಯ ನಾಯಕರ ಸಭೆ ನಡೆಯಲಿದ್ದು, ಸಭೆ ಬಳಿಕ ಸೀಟು ಹಂಚಿಕೆ ಅಂತಿಮವಾಗಲಿದೆ. ಜೆಡಿಎಸ್‌ಗೆ ಎಷ್ಟು ಕ್ಷೇತ್ರ ಸಿಗಲಿದೆ ಎಂಬುದೇ ಭಾರೀ ಕುತೂಹಲವಾಗಿದೆ.

ಇದನ್ನೂ ವೀಕ್ಷಿಸಿ:  ‘ನನ್ನ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ’.. ರಶ್ಮಿಕಾ ಮಂದಣ್ಣ ಪ್ರೀತಿ ಸಂದೇಶ ಯಾರಿಗೆ..?

Video Top Stories