ಹೆಜ್ಜೆ ಹೆಜ್ಜೆಗೂ ಬಿಬಿಎಂಪಿ ಗುತ್ತಿಗೆದಾರರು ಯೂಟರ್ನ್: ಕಮಿಷನ್ ದಂಗಲ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ !

ಗುತ್ತಿಗೆದಾರರ ಕಮಿಷನ್ ದಂಗಲ್ನಲ್ಲಿ ದಿನಕ್ಕೊಂದು ಟ್ವಿಸ್ಟ್
ಹೆಜ್ಜೆ ಹೆಜ್ಜೆಗೂ ಬಿಬಿಎಂಪಿ ಗುತ್ತಿಗೆದಾರರು ಯೂಟರ್ನ್..!
ಪೊಲೀಸ್ ವಿಚಾರಣೆಯಲ್ಲೂ ಉಲ್ಟಾ ಹೊಡೆದ ಗುತ್ತಿಗೆದಾರರು

Share this Video
  • FB
  • Linkdin
  • Whatsapp

ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಕಮಿಷನ್ ಕೇಳುತ್ತಿದ್ದಾರೆ ಅನ್ನೋ ಗಂಭೀರ ಆರೋಪ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.. ಡಿಕೆಶಿ ಅಧಿಕಾರಿಗಳ ಮೂಲಕ ಕಮಿಷನ್(Commission) ಬೇಡಿಕೆ ಇಡ್ತಿದ್ದಾರೆ ಎಂದು ಗವರ್ನರ್‌ಗೆ ದೂರು ಕೊಟ್ಟಿದ್ದರು. ಅಷ್ಟೇ ಅಲ್ಲ ಗುತ್ತಿಗೆದಾರ(Contractor) ಹೇಮಂತ ಬಹಿರಂಗವಾಗೇ ಡಿಕೆಶಿಗೆ ಅಜ್ಜಯ್ಯನ ಮೇಲೆ ಆಣೆ ಪ್ರಮಾಣಕ್ಕೆ ಆಹ್ವಾನ ಕೊಟ್ಟಿದ್ರು. ಗುತ್ತಿಗೆದಾರರ ಕಮಿಷನ್ ದಂಗಲ್ ಇಲ್ಲಿಗೆ ನಿಂತಿಲ್ಲ. ಮಾಜಿ ಸಿಎಂ ಬಿಸ್‌ವೈ, ಬೊಮ್ಮಾಯಿ ಅವರನ್ನೂ ಭೇಟಿ ಮಾಡಿದ್ರು. ಇದರ ಬೆನ್ನಲ್ಲೇ ಜೆಡಿಎಸ್, ಬಿಜೆಪಿ(BJP) ನಾಯಕರು ಸಿದ್ದು ಸರ್ಕಾರದ ವಿರುದ್ಧ ಕಮಿಷನ್ ಟೀಕಾಸ್ತ್ರ ಹಿಡಿದು ದಾಳಿಗೆ ಇಳಿದರು. ಯಾವಾಗ ಪ್ರಕರಣದಲ್ಲಿ ರಾಜಕೀಯ ಬಿರುಗಾಳಿ ಏಳ್ತೋ ಗುತ್ತಿಗೆದಾರರು ಯೂಟರ್ನ್ ಹೊಡೆದು ಬಿಟ್ರು. ಹೀಗೆ ಆಗಸ್ಟ್ 14ರಂದು ಗುತ್ತಿಗೆದಾರರು ಯೂಟರ್ನ್ ಹೊಡೆದು ಬಿಟ್ರು.. ನಾವು ಕಮಿಷನ್ ಆರೋಪವನ್ನೇ ಮಾಡಿಲ್ಲ ಎಂದರು. ಈ ಮಧ್ಯೆ ಗುತ್ತಿಗೆದಾರರು ಗವರ್ನರ್‌ಗೆ ಬರೆದ ದೂರಿಗೆ ಪ್ರತಿಯಾಗಿ ಬಿಬಿಎಂಪಿ(BBMP) ಹಣಕಾಸು ವಿಭಾಗದ ಅಪರ ಆಯುಕ್ತ ಮಹಾದೇವ್ ಗುತ್ತಿಗೆದಾರರ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ಪ್ರತಿ ದೂರು ನೀಡಿದ್ದರು. ಗುತ್ತಿಗೆದಾರರು ಬಾಕಿ ಬಿಲ್‌ಗಾಗಿ ಒತ್ತಡ ಹಾಕೋದಲ್ದೆ ರಾಜ್ಯಪಾಲರಿಗೆ ಕೊಟ್ಟ ದೂರಿನಲ್ಲಿ ದಯಾಮರಣಕ್ಕೆ ಮನವಿ ಮಾಡಿದ್ದಾರೆ. ಹೀಗಾಗಿ ದೂರಿನ ಅಸಲಿಯತ್ತು ಪರಿಶೀಲಿಸಿ ಹಾಗೂ ಅಸಲಿ ಸಹಿಗಳೇ ಎಂಬುದನ್ನ ಪರಿಶೀಲಿಸಿ ಎಂದು ಮನವಿ ಮಾಡಿದ್ದರು. ಇದೀಗ ದೂರು ಸ್ವೀಕರಿಸಿದ ಶೇಷಾದ್ರಿಪುರಂ ವಿಭಾಗದ ಎಸಿಪಿ ಪ್ರಕಾಶ್‌ ರೆಡ್ಡಿ ತನಿಖೆಗೆ ಇಳಿದಿದ್ದಾರೆ. ಆದ್ರೆ, ತನಿಖೆ ವೇಳೆಯೂ ಗುತ್ತಿಗೆದಾರರು ಯೂಟರ್ನ್ ಹೊಡೆದಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ:  ಬಿಜೆಪಿಗೆ ಬಿಗ್ ಶಾಕ್ ಕೊಡ್ತಾರಾ ಬಾಂಬೆ ಬಾಯ್ಸ್ ? ಕಾಂಗ್ರೆಸ್‌ಗೆ ವಲಸಿಗ ಶಾಸಕರ ಘರ್‌ವಾಪ್ಸಿ ಬಹುತೇಕ ಫಿಕ್ಸ್ ?

Related Video