ಬಿಜೆಪಿಗೆ ಬಿಗ್ ಶಾಕ್ ಕೊಡ್ತಾರಾ ಬಾಂಬೆ ಬಾಯ್ಸ್ ? ಕಾಂಗ್ರೆಸ್‌ಗೆ ವಲಸಿಗ ಶಾಸಕರ ಘರ್‌ವಾಪ್ಸಿ ಬಹುತೇಕ ಫಿಕ್ಸ್ ?

ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ಗುಸುಗುಸು
ಬಿಜೆಪಿಗೆ ಬಂದಿದ್ದ ಹೆಬ್ಬಾರ್ ಮತ್ತೆ ಕಾಂಗ್ರೆಸ್‌ಗೆ ?
ಘರ್‌ವಾಪ್ಸಿ ಚರ್ಚೆ ಬೆನ್ನಲ್ಲೇ ಬೆಂಬಲಿಗರ ಜೊತೆ ಸಭೆ

Share this Video
  • FB
  • Linkdin
  • Whatsapp

ಬಾಂಬೆ ಬಾಯ್ಸ್‌ ಬಿಜೆಪಿಗೆ ಬಿಗ್‌ ಶಾಕ್‌ ಕೊಡುವಂತೆ ಕಾಣುತ್ತಿದೆ. ಶಾಸಕ ಶಿವರಾಮ್‌ ಹೆಬ್ಬಾರ್‌(MLA Shivaram Hebbar) ಕಾಂಗ್ರೆಸ್‌(Congress) ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ಗುಸುಗುಸು ಆರಂಭವಾಗಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ(BJp) ಬಂದಿದ್ದ ಹೆಬ್ಬಾರ್ ಮತ್ತೆ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಘರ್‌ವಾಪ್ಸಿ ಚರ್ಚೆ ಬೆನ್ನಲ್ಲೇ ಬೆಂಬಲಿಗರ ಜೊತೆ ಶಿವರಾಮ್‌ ಹೆಬ್ಬಾರ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬೆಂಬಲಿಗರು ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್‌ ಸೇರುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಪ್ತ ವಲಯದ ಮುಖಂಡರೂ ಸಹ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿಗೆ ಹೋಗಿ ತೀರ್ಮಾನ ಮಾಡ್ತೇನೆ ಎಂದು ಹೆಬ್ಬಾರ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ'ವಾಮನ' ಮಾಸ್ ಸಂಚಾರ: ಮೈಸೂರಿನಲ್ಲಿ ಆ್ಯಕ್ಷನ್ ಧಮಾಕದಲ್ಲಿ ಮಿಂಚಿದ ಧನ್ವೀರ್ !

Related Video