Loksabha Election: ಯಾರಿಗೆ ಯಾರು ಪೈಪೋಟಿ ? ಹೇಗಿದೆ ರಣಕಣ ಪರಿಸ್ಥಿತಿ? ಬಿಜೆಪಿಯ ತಂತ್ರಕ್ಕೆ ಟಕ್ಕರ್ ಕೊಡಲಿದೆಯಾ ಕಾಂಗ್ರೆಸ್ ?

ಪದ್ಮವ್ಯೂಹ ಬೇಧಿಸೋಕೆ ಸಿದ್ಧವಾಗಿದೆ ನಿಗೂಢ ರಣತಂತ್ರ..?
ಸಮೀಕರಣವನ್ನೆಲ್ಲಾ ಬದಲಾಯಿಸುತ್ತಾ ಟಿಕೆಟ್ ಹಂಚಿಕೆ!
ಚುನಾವಣೆಯ ಹೊತ್ತಲ್ಲಿ ಕದನ ಕುತೂಹಲ ಹೆಚ್ಚಿದ್ದೇಕೆ..?
 

First Published Mar 15, 2024, 4:58 PM IST | Last Updated Mar 15, 2024, 4:58 PM IST

ಯಾವ ಕ್ಷಣದಲ್ಲಿ ಬೇಕಿದ್ರೂ ಚುನಾವಣೆ(Loksabha) ಘೋಷಣೆಯಾಗ್ಬೋದು. ಆದ್ರೆ, ಆ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ರಾಜಕೀಯ ಸಮರಘೋಷ ಮೊಳಗಿದೆ. ಅತ್ತ ಕೇಸರಿ ಪಡೆ, ಇತ್ತ ಹಸ್ತ ಸೇನೆ, ಇಬ್ಬರೂ ಕೂಡ, ಯುದ್ಧ ಸನ್ನದ್ಧರಾಗಿ ರಣಾಂಗಣ ಪ್ರವೇಶಿಸೋಕೆ ಕಾಯ್ತಾ ಇದಾರೆ. ಈಗಾಗಲೇ ಕಾಂಗ್ರೆಸ್(Congress) ಪಾರ್ಟಿ, ತನ್ನ ಅಭ್ಯರ್ಥಿಗಳ ಪಟ್ಟಿನಾ ರಿಲೀಸ್ ಮಾಡಿತ್ತು. ಅದರ ಬೆನ್ನಲ್ಲೆ ಬಿಜೆಪಿಯೂ ಕೂಡ, ತನ್ನ ರಣಕಲಿಗಳ ಎರಡನೇ ಲಿಸ್ಟ್ ರಿಲೀಸ್ ಮಾಡಿದೆ. ಈ ಲಿಸ್ಟ್‌ನಲ್ಲಿ ಕರ್ನಾಟಕದ(Karnataka) ಬರೋಬ್ಬರಿ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿದೆ. ಅದರ ಜೊತೆಗೆ ಅಚ್ಚರಿಯೂ ಇದೆ. ಬಿಜೆಪಿ(BJP) ಈ ಹಿಂದೆ ಮೊದಲ ಪಟ್ಟಿ ಅನೌನ್ಸ್ ಮಾಡಿದಾಗ, ಅದರಲ್ಲಿ ಕರ್ನಾಟಕದ ಯಾರ ಹೆಸರೂ ಇರಲಿಲ್ಲ. ಆದ್ರೆ ಈಗ, ಎರಡನೇ ಪಟ್ಟಿಯಲ್ಲಿ, ಒಟ್ಟು 20 ಮಂದಿ ಅಭ್ಯರ್ಥಿಗಳ ಹೆಸರಿದೆ. ಆ ಪೈಕಿ, 8 ಮಂದಿ ಲಿಂಗಾಯತರು, ಮೂವರು ಪರಿಶಿಷ್ಟ ಜಾತಿಯವರು, ಇಬ್ಬರು ಒಕ್ಕಲಿಗರು ಹಾಗೂ ಬ್ರಾಹ್ಮಣರು. ಉಳಿದ ಐವರು, ಪರಿಶಿಷ್ಟ ಪಂಗಡ, ಬಂಟ, ಬಿಲ್ಲವ, ಬಲಿಜ ಹಾಗೂ ಕ್ಷತ್ರಿಯ ಸಮುದಾಯಕ್ಕೆ ಸೇರಿದವರು. ಈ ಲಿಸ್ಟ್ ನೋಡಿ ಅಚ್ಚರಿಯಾಗೋದಕ್ಕೂ ಕಾರಣವಿದೆ. ಅಂತೂ 2024ರ ಚುನಾವಣೆಯಲ್ಲಿ ಘಟಾನುಘಟಿಗಳಿಗೆ ಟಿಕೆಟ್ ಮಿಸ್ ಆಗಿದೆ. ವಿಭಿನ್ನ ಪ್ರಯೋಗಕ್ಕೆ, ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ.

ಇದನ್ನೂ ವೀಕ್ಷಿಸಿ:  Narendra Modi:ಮತ್ತೆ ಕರ್ನಾಟಕದಿಂದಲೇ ಮೋದಿ ಚುನಾವಣಾ ಪ್ರಚಾರ: ಈ ಬಾರಿಯೂ ಕಲಬುರಗಿಯಿಂದಲೇ ಎಲೆಕ್ಷನ್ ಕಿಕ್‌ಸ್ಟಾರ್ಟ್!