ಅಜ್ಜಿ-ಅಮ್ಮನಂತೆ ಪ್ರಿಯಾಂಕಾಗೂ ರಾಜ್ಯದಿಂದಲೇ ರಾಜಕೀಯ ಭವಿಷ್ಯಕ್ಕೆ ತಿರುವು ಸಿಗುತ್ತಾ?

ಅಜ್ಜಿ ಇಂದಿರಾ ಗಾಂಧಿ ಅಮ್ಮ ಸೋನಿಯಾ ಗಾಂಧಿ ನಂತರ ಈಗ ಮಗಳು ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಬರ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಮುಂದಿನ ತಿಂಗಳು 10 ರಂದು ನಡೆಯುವ ರಾಜ್ಯಸಭೆಗೆ ರಾಜ್ಯದಿಂದಲೇ ಸ್ಪರ್ಧಿಸಬೇಕೆಂದು ಪ್ರಿಯಾಂಕಾಗೆ ಆಹ್ವಾನ ಕೊಟ್ಟಿದ್ದಾರಂತೆ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್. ಹಾಗಿದ್ರೆ ರಾಜ್ಯಕ್ಕೆ ಆಹ್ವಾನಿಸಿರೋ ಡಿಕೆಶಿ ಹಿಂದಿನ ಲೆಕ್ಕಾಚಾರವೇನು? ಹಾಗೂ ಅಜ್ಜಿ ಅಮ್ಮನಂತೆ ಪ್ರಿಯಾಂಕಾಗೂ ರಾಜ್ಯದಿಂದಲೇ ರಾಜಕೀಯ ತಿರುವು ಸಿಗುತ್ತಾ
 

Share this Video
  • FB
  • Linkdin
  • Whatsapp

ನವದೆಹಲಿ(ಮೇ.16): ಅಜ್ಜಿ ಇಂದಿರಾ ಹಾಗೂ ಅಮ್ಮ ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿ ರಾಜ್ಯದತ್ತ ಮುಖ ಮಾಡ್ತಾರಾ ಅನ್ನೋ ಪಿಸುಮಾತುಗಳು ರಾಜ್ಯ ರಾಜಕಾರಣದಲ್ಇ ಹರಿದಾಡುತ್ತಿದೆ. ಮುಂದಿನ ತಿಂಗಳು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಿಂದಲೇ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಹಾಗಾದ್ರೆ ಇಲ್ಲಿಂದ ಸ್ಪರ್ಧಿಸಿ ಅಜ್ಜಿ ಹಾಗೂ ಅಮ್ಮನಂತೆ ತಮ್ಮ ರಾಜಕೀಯ ಬದುಕಿನ ತಿರುವು ಪಡೆದುಕೊಳ್ಳುತ್ತಾರಾ?

Add Asianetnews Kannada as a Preferred SourcegooglePreferred

ಮುಂದಿನ ತಿಂಗಳು ಜೂನ್ 10 ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಈ ಎಲೆಕ್ಷನ್‌ಗೆ ಡಿಕೆಶಿ, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಮೂವರೂ ಆಹ್ವಾನಿಸಿದ್ದಾರೆನ್ನಲಾಗಿದೆ. ಆದರೆ ಈ ಮೂವರಲ್ಲಿ ಡಿಕೆಶಿ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆಂಬ ಮಾತುಗಳೂ ಜೋರಾಗಿವೆ. ಇನ್ನು ಈ ಆಹ್ವಾನದ ಹಿಂದೆ ಡಿಕೆಶಿ ಹಲವಾರು ಮಾಸ್ಟರ್‌ ಪ್ಲಾನ್‌ಗಳಿವೆ ಎಂದೂ ಅಂದಾಜಿಸಲಾಗಿದೆ. 

Related Video