ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ: ಕೊಟ್ಟ ಮಾತನ್ನು ಉಳಿಸಿಕೊಂಡ ಸಿದ್ದರಾಮಯ್ಯ!

2004ರಲ್ಲಿ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ‌ದ್ದಾಗ ನನಗೆ ಟಿಕೆಟ್ ತಪ್ಪಿಸಿದ್ದ ಸಿದ್ದರಾಮಯ್ಯ ಅವರು ಈಗ ಟಿಕೆಟ್‌ ಕೊಡಿಸಿ ಮಾತು ಉಳಿಸಿಕೊಂಡಿದ್ದಾರೆ ಎಂದು ಬಿ.ಎಲ್. ದೇವರಾಜು ಹೇಳಿದರು.

Share this Video
  • FB
  • Linkdin
  • Whatsapp

ಮಂಡ್ಯ (ಏ.06): ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕೊಟ್ಟ ಮಾತನ್ನು ಸಿದ್ದರಾಮಯ್ಯ ಅವರು ಉಳಿಸಿಕೊಂಡಿದ್ದಾರೆ. 2004ರಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ‌ದ್ದಾಗ ಬಿ.ಎಲ್.ದೇವರಾಜುಗೆ ಟಿಕೆಟ್ ತಪ್ಪಿಸಿದ್ದ ಸಿದ್ದರಾಮಯ್ಯ ಈಗ ಟಿಕೆಟ್‌ ಕೊಡಿಸಿ ಮಾತು ಉಳಿಸಿಕೊಂಡಿದ್ದಾರೆ ಎಂದು ಬಿ.ಎಲ್. ದೇವರಾಜು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ನಾನು ಜೆಡಿಎಸ್‌ನಲ್ಲಿದ್ದಾಗ ಕೆ.ಆರ್. ಪೇಟೆಯ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಸಿಗುವುದನ್ನು ತಪ್ಪಿಸಿದ್ದರು. ಆಗ ನನಗೆ ಟಿಕೆಟ್‌ ತಪ್ಪಿಸಿ ದಿ.ಕೃಷ್ಣ ಅವರಿಗೆ ಟಿಕೆಟ್‌ ಕೊಡಿಸಿದ್ದರು. ಆಗ ಸ್ವತಃ ದೇವೇಗೌಡರೇ ದೇವರಾಜಿಗೆ ಟಿಕೆಟ್‌ ನೀಡಬೇಕು ಎಂದು ಹೇಳಿಕೊಂಡಿದ್ದರು. ಅಂದಿನಿಂದಲೂ ಅವರು ಅನ್ಯಾಯ ಮಾಡಿದ ಮನೋಭಾವ ಕಾಡುತ್ತಿದೆ ಎಂದು ಹೇಳುತ್ತಾ ಬಂದಿದ್ದರು. ಇತ್ತೀಚೆಗೆ ನೀನು ಕಾಂಗ್ರೆಸ್‌ಗೆ ಬಾರಯ್ಯ ನಿನಗೆ ಟಿಕೆಟ್‌ ಕೊಡಿಸುವುದು ನನ್ನ ಜವಾಬ್ದಾರಿ ಎಂದು ಮಾತನ್ನು ಕೊಟ್ಟಿದ್ದರು. ಅದರಂತೆ 2023ರ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಟಿಕೆಟ್‌ ಕೊಡಿಸುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದಾಗ ಆಗಿದ್ದ ಅನ್ಯಾಯವನ್ನು ಈಗ ಸರಿಪಿಸಿ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು.

Related Video