ಕೇಂದ್ರದಿಂದ ಸಂಪೂರ್ಣ ಬರ ಪರಿಹಾರ ಬಿಡುಗಡೆಗೆ ಒತ್ತಾಯ: ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಬರ ಬಡಿದಾಟ ನಿಂತತೆ ಕಾಣುತ್ತಿಲ್ಲ. ಸಂಪೂರ್ಣ ಬರ ಪರಿಹಾರಕ್ಕೆ ಆಗ್ರಹಿಸಿ ಕಾಂಗ್ರೆಸ್ ಇಂದು ಮತ್ತೆ ಪ್ರತಿಭಟನೆ ನಡೆಸಲಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಬರ ಬಡಿದಾಟ ನಿಂತತೆ ಕಾಣುತ್ತಿಲ್ಲ. ಬರ ಪರಿಹಾರಕ್ಕಾಗಿ(Drought relief) ಕೇಂದ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ರಾಜ್ಯ ಸರ್ಕಾರ, ಪರಿಹಾರ ಬಂದಮೇಲೂ ಕೇಂದ್ರದ ವಿರುದ್ಧ ಪ್ರತಿಭಟನೆ(Protest) ನಡೆಸಲು ಮುಂದಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್(Congress) ನಾಯಕರು ಇಂದು ಪ್ರೊಟೆಸ್ಟ್ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿಕೆಶಿ(DK shivakumar) ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. 18,172 ಕೋಟಿ ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಆದ್ರೆ 3,454 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹೀಗಾಗಿ ಸಂಪೂರ್ಣ ಬರ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು.
ಇದನ್ನೂ ವೀಕ್ಷಿಸಿ: Jr. NTR Angry on Fan: ಏಕಾಏಕಿ ಅಭಿಮಾನಿ ಮೇಲೆ ಜೂ.ಎನ್‌ಟಿಆರ್ ಕೆಂಡಾಮಂಡಲ: ಅಸಲಿಗೆ ನಡೆದಿದ್ದೇನು?