Jr. NTR Angry on Fan: ಏಕಾಏಕಿ ಅಭಿಮಾನಿ ಮೇಲೆ ಜೂ.ಎನ್‌ಟಿಆರ್ ಕೆಂಡಾಮಂಡಲ: ಅಸಲಿಗೆ ನಡೆದಿದ್ದೇನು?

ನಟ ಜೂ.ಎನ್‌ಟಿಆರ್ ಅಭಿಮಾನಿಯ ಮೇಲೆ ಸಿಟ್ಟಿಗೆದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 
 

Share this Video
  • FB
  • Linkdin
  • Whatsapp

ಆರ್ ಆರ್ ಆರ್ ಸಿನಿಮಾ ನಂತರ ನಾಟು ನಾಟು ಹಾಡಿನ ಖ್ಯಾತಿಯಿಂದಾಗಿ ಜೂ.ಎನ್‌ಟಿಆರ್‌ಗೆ(Jr.NTR) ಸಹ ಗ್ಲೋಬಲ್ ಸ್ಟಾರ್ ಪಟ್ಟ ಬಂದು ಬಿಟ್ಟಿದೆ. ಎಲ್ಲಿ ಹೋದ್ರೂ ಎಲ್ಲಿ ಬಂದ್ರೂ ಫ್ಯಾನ್ಸ್(Fan) ಮತ್ತು ಮಾಧ್ಯಮಗಳು ಮುಗಿ ಬೀಳುತ್ತಿವೆ. ಇದೀಗ ನಟ ಜೂ.ಎನ್‌ಟಿಆರ್ ಅಭಿಮಾನಿಯ ಮೇಲೆ ಸಿಟ್ಟಿಗೆದ್ದ ವಿಡಿಯೋವೊಂದು(Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಜೂನಿಯರ್ ಎನ್‌ಟಿಆರ್ ಅವರು ಮುಂಬೈನ(Mumbai) ಹೋಟೆಲ್‌ನ ಹೊರಗೆ ಫೋನ್‌ನಲ್ಲಿ ಮಾತಾಡುತ್ತಾ ಹೋಗುತ್ತಿರುತ್ತಾರೆ. ಆಗ ಕ್ಯಾಮೆರಾಮೆನ್ ಒಬ್ಬ ನಟನ ಅನುಮತಿಯಿಲ್ಲದೆ ಅವರ ಫೋಟೋ ತೆಗೆಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಜೂ.ಎನ್‌ಟಿಆರ್ ಕೂಡಲೇ ಆ ವ್ಯಕ್ತಿಗೆ ಗದರಿಸಿದ್ದಾರೆ. ಕೂಡಲೇ ಅಲ್ಲೇಯಿದ್ದ ಬಾಡಿಗಾರ್ಡ್ಸ್‌ ಆತನನ್ನು ದೂರ ತಳ್ಳಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ: ದುನಿಯಾ ವಿಜಯ್ ಜೊತೆ 'ಟೋಬಿ'ರಾಜ್ ಬಿ ಶೆಟ್ಟಿ: ಚೋಮನದುಡಿ ಸ್ಪೂರ್ತಿಯಲ್ಲಿ ಬರುತ್ತಾ ಈ ಜೋಡಿ ಸಿನಿಮಾ ?

Related Video