ಹೆಂಗಸರಿಗಿಂತ ಈಗ ಗಂಡಸರೇ ಜಾಸ್ತಿ ಮೇಕಪ್‌ ಹಾಕಿಕೊಳ್ತಿದ್ದಾರೆ: ಡಿ.ಕೆ. ಶಿವಕುಮಾರ್‌

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದೆ. 
 

Share this Video
  • FB
  • Linkdin
  • Whatsapp

ಕೇಂದ್ರ ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ನೀಡದಿರುವುದನ್ನು ಖಂಡಿಸಿ ಉಪಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಗೆ ಮಳೆಯಿದ್ದರೂ ಕಾಂಗ್ರೆಸ್‌ ಕಾರ್ಯಕರ್ತರು ಬಂದಿದ್ದರು. ಅಕ್ಕಿಯನ್ನು ಬೇಯಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಪಾಪ ಮಹಿಳೆಯರ ಮೇಕಪ್ ಎಲ್ಲ ಹೋಯ್ತು. ನಮ್ಮ ಸಲೀಂ ಅಹ್ಮದ್ ಮೇಕಪ್ ಕೂಡ ಹೋಗಿದೆ. ರಾಮಲಿಂಗರೆಡ್ಡಿ ಮೇಕಪ್ ಹಾಕಿಲ್ಲ ಎಂದು ಹೇಳಿದರು. ಇದಕ್ಕೆ ಅಲ್ಲಿಂದ ಕಾರ್ಯಕರ್ತರೆಲ್ಲಾ ನಕ್ಕರು. ಮಳೆಗೆ ಚಳಿಗೆ ನಾವು ಹೆದರಲ್ಲ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋಣ ಎಂದು ಡಿಕೆಶಿ ಹೇಳಿದರು.

ಇದನ್ನೂ ವೀಕ್ಷಿಸಿ: 29 ವರ್ಷದ ಹೀರೋಯಿನ್‌ಗೆ 83 ವರ್ಷದ ಬಾಯ್‌ಫ್ರೆಂಡ್‌: ಮದುವೆಯಾಗದೆ ತಂದೆ ತಾಯಿಯಾದ ನಟ-ನಟಿ !

Related Video