Congress Cadre Party: ಕಾಂಗ್ರೆಸ್ ಕುಟುಂಬ.. ಇದು ‘ಕೈ’ ಕೇಡರ್..! ಏನಿದು ಪಕ್ಷದ ಹೊಸ ಪ್ಲ್ಯಾನ್?
ಕಾಂಗ್ರೆಸ್ ಕೇಡರ್ ಪಾರ್ಟಿ ಮಾಡಲು ಹೆಜ್ಜೆ ಇಟ್ಟಿದ್ದು, ಬೂತ್ ಮಟ್ಟದಲ್ಲಿ ಸಂಘಟನೆ ಬಲವರ್ಧನೆಗೆ ‘ಕಾಂಗ್ರೆಸ್ ಕುಟುಂಬ’ ಪ್ಲಾನ್ ರೂಪಿಸಲಾಗಿದೆ.
ತಳಮಟ್ಟದಿಂದ ಪಕ್ಷ ಸಂಘಟನೆಗೆ ಕಾಂಗ್ರೆಸ್ ನಿರ್ಧಾರ ಮಾಡಿದೆ. ಕಾಂಗ್ರೆಸ್ (Congress) ಪಕ್ಷ ಸಂಘಟನೆಗೆ ಹೊಸ ಕಾಯಕಲ್ಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (D K Shivakumar) ಮುಂದಾಗಿದ್ದಾರೆ. ಕಾಂಗ್ರೆಸ್ ಕೇಡರ್ ಪಾರ್ಟಿ(Congress Cadre Party) ಮಾಡಲು ಹೆಜ್ಜೆ ಇಟ್ಟಿದ್ದು, ಬೂತ್ ಮಟ್ಟದಲ್ಲಿ ಸಂಘಟನೆ ಬಲವರ್ಧನೆಗೆ ‘ಕಾಂಗ್ರೆಸ್ ಕುಟುಂಬ’(Congress family) ಪ್ಲಾನ್ ರೂಪಿಸಲಾಗಿದೆ. ಜೂನ್ 1 ರಂದು ಪಕ್ಷದ ಪದಾಧಿಕಾರಿಗಳ ಸಭೆಯನ್ನು ಡಿಕೆಶಿ ಕರೆದಿದ್ದು, ಕಾಂಗ್ರೆಸ್ ಕುಟುಂಬ ಕಾರ್ಯಕ್ರಮದ ಬಗ್ಗೆ ವಿವರವಾದ ಮಾಹಿತಿ ನೀಡಲಿದ್ದಾರೆ ಎಂದು ತಿಳಿದಿಬಂದಿದೆ.
ಈ ಪ್ಲ್ಯಾನ್‌ನಲ್ಲಿ ಪ್ರತಿ ಬೂತ್‌ನಲ್ಲಿ 50 ಸದಸ್ಯರನ್ನು ಸೇರಿಸಬೇಕಿದೆ. ಆ ಬೂತ್ ಹಳ್ಳಿಗಳಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ. ಜೊತೆಗೆ ಯಾವುದೇ ತೀರ್ಮಾನ ಮಾಡಬೇಕು ಎಂದರೂ ಸಹ 50 ಮಂದಿಯನ್ನು ಸೇರಿಸಿ ತೀರ್ಮಾನ ಮಾಡಬೇಕಿದೆ. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರ ಪಕ್ಷವಾಗಿ ಮಾಡಬೇಕು ಅನ್ನೋದು ಡಿಕೆಶಿ ಹಾಗೂ ಮುಖಂಡರ ನಿಲುವಾಗಿದೆ. ದೊಡ್ಡ ನಾಯಕರಾದರೂ ಸಹ ಜವಾಬ್ದಾರಿಯಿಂದ ಕಾಂಗ್ರೆಸ್ ಕುಟುಂಬ ಬೆಳೆಸಬೇಕು ಎಂದು ನಿರ್ಧಾರ ಮಾಡಲಾಗಿದ್ದು, ತಿಂಗಳಿಗೊಮ್ಮೆ ಸಿಎಂ ಅವರಿಂದ ಕಾರ್ಯಕರ್ತರ ಭೇಟಿ ಸಹ ನಡೆಯಲಿದೆ.
ಇದನ್ನೂ ವೀಕ್ಷಿಸಿ: ನಾನೂ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಪರ ನಿಲ್ತೀನಿ : ಬಿಹಾರದಲ್ಲಿ ಮೋದಿ ಹೇಳಿಕೆ