Asianet Suvarna News Asianet Suvarna News

ಮುಗಿಯಿತಾ ಶಾಸಕ Vs ಸಚಿವರ ಅಂತರ್ಯುದ್ಧ ?: ಕೈ ಶಾಸಕಾಂಗ ಸಭೆಯಲ್ಲಿ ಒಳ ಬೇಗುದಿ ಸ್ಫೋಟ..!

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಒಳ ಬೇಗುದಿ ಸ್ಫೋಟ..!
ಕಾಂಗ್ರೆಸ್ ಶಾಸಕರ  ಹೃದಯ ಸಮುದ್ರ ಕಲಕಿದ್ದೇಕೆ ಗೊತ್ತಾ..?
ಸೀನಿಯರ್‌ಗಳ ಸಿಟ್ಟು,ಮಂತ್ರಿಗಳ ವಿರುದ್ಧ ದಂಗೆ,ಪತ್ರ ವ್ಯವಹಾರ
ಕಿಡಿ ಹೊತ್ತಿಸಿದ ಶಾಸಕರಿಗೆ ಸಿದ್ದು,ಡಿಸಿಎಂ ಡಿಕೆಶಿ ಕಿವಿ ಮಾತು..!
 

ಪ್ರಚಂಡ ಬಲದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ ಕೈ ಸರ್ಕಾರ. ಜೋಡೆತ್ತು ಸಾರಥ್ಯದ ಸರ್ಕಾರಕ್ಕೆ ಎರಡು ತಿಂಗಳು ತುಂಬುತ್ತಲೇ ರೆಬೆಲ್ ಆದ್ರು ಶಾಸಕರು. ಹಿರಿಯ ಶಾಸಕರ(MLAs) ಅಸಮಾಧಾನದ ಕಿಡಿಗೆ ಕಾಂಗ್ರೆಸ್‌(Congress) ಬೆಚ್ಚಿ ಬಿದ್ದಿದೆ. ಕೈ ಕೋಟೆಯೊಳಗೆ ಎದ್ದಿದ್ದ ಅಸಮಾಧಾನದ ಬೆಂಕಿಯ ಅಗ್ನಿಕುಂಡವೀಗ ಬೂದಿ ಮುಚ್ಚಿದ ಕೆಂಡವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎದುರಾಗಿದ್ದ ಮೊದಲ ಅಗ್ನಿಪರೀಕ್ಷೆ ಅಂದರೇ, ಇದು ಸ್ವಂತ ಶಾಸಕರ ಕಾರಣದಿಂದಲೇ ಭುಗಿಲೆದ್ದಿದ್ದ ಅಸಮಾಧಾನ. ಇದು ಪ್ರತಿಪಕ್ಷ ಬಿಜೆಪಿಗೆ (BJP)ಅಸ್ತ್ರವಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಪತನದ ಭೀತಿಯಿಲ್ಲ. ಕಾರಣ, ಸರ್ಕಾರದ ಬೆನ್ನಿಗಿರೋದು 135+3 ಶಾಸಕರ ಪ್ರಚಂಡ ಬಲ. ಹೀಗಾಗಿ ಯಾವ ಆಪರೇಷನ್ ಭಯವೂ ಸಿದ್ದು ಸರ್ಕಾರಕ್ಕಿಲ್ಲ. ಆದ್ರೆ ಯಾವ ಶಾಸಕರ ಶಕ್ತಿಯಿಂದ ಸರ್ಕಾರದ ರಚನೆಯಾಗಿದ್ಯೋ, ಅದೇ ಶಾಸಕರು ತಿರುಗಿ ಬಿದ್ರೆ..? ಆಗ ಟೆನ್ಷನ್ ಶುರುವಾಗೋದು ಸಹಜ. ಸಿದ್ದರಾಮಯ್ಯನವರಿಗೆ(Siddaramaiah) ಶುರುವಾಗಿದ್ದ ಟೆನ್ಷನ್ ಅದೇ. ಈ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ಸಭೆ ಕರೆದಿದ್ರು. ಆ ಸಭೆಯಲ್ಲಿ ಶಾಸಕರ ಒಳ ಬೇಗುದಿ, ಅತೃಪ್ತಿಯ ಕಿಡಿ ಸ್ಫೋಟವಾಗಿದೆ.

ಇದನ್ನೂ ವೀಕ್ಷಿಸಿ:  3ನೇ ಸಲ ಗೆದ್ದು, ಮತ್ತೆ ಗದ್ದುಗೆ ಏರೋಕೆ ಸಿದ್ಧ: ಅಬ್ ಕಿ ಬಾರ್.. ಫಿರ್ ಏಕ್ ಬಾರ್ ಬಳಿಕ ತೀಸ್ರೇ ಬಾರ್!