Asianet Suvarna News Asianet Suvarna News

3ನೇ ಸಲ ಗೆದ್ದು, ಮತ್ತೆ ಗದ್ದುಗೆ ಏರೋಕೆ ಸಿದ್ಧ: ಅಬ್ ಕಿ ಬಾರ್.. ಫಿರ್ ಏಕ್ ಬಾರ್ ಬಳಿಕ ತೀಸ್ರೇ ಬಾರ್!

ಮೋದಿ ತ್ರಿವಿಕ್ರಮ  ವಿಜಯದ ಮರ್ಮವೇನು? 
ಎದುರಾಳಿಗಳಿಗೆ ಮೋದಿ ನೀಡಿದ ಮರ್ಮಾಘಾತ!
ಕಾಂಗ್ರೆಸ್ ಗ್ಯಾರಂಟಿಗೆ ಎದುರಾಗಿ ಮೋದಿ ಗ್ಯಾರಂಟಿ!

ದೇಶಕ್ಕೊಂದು ನಿಗೂಢ ಸುಳಿವು ನೀಡಿದೆಯಾ ಮೋದಿ(Modi) ಸಾರಿದ ಆ ಗ್ಯಾರಂಟಿ ಘೋಷಣೆ..? ಐಎನ್ಡಿಐಎ(I.N.D.I.A)  ತಂತ್ರಕ್ಕೆ ಕೇಸರಿ (BJP) ಪಡೆ ಹೆಣೆದಾಗಿದೆ ವಿಶಿಷ್ಠ ರಣತಂತ್ರ. ಪ್ರಧಾನಿ ನರೇಂದ್ರ ಮೋದಿ ಅವರ ಒಂದೊಂದು ಮಾತು ಕೂಡ, ಗನ್ನಿಂದ ಹೊರಟ ಬುಲೆಟ್ ಇದ್ದ ಹಾಗೆ. ಪ್ರತಿ ಮಾತಿಗೂ ಒಂದು ಟಾರ್ಗೆಟ್ ಇರುತ್ತೆ. ಟಾರ್ಗೆಟ್ ರೀಚ್ ಆದ ಬಳಿಕ ಒಂದು ಎಫೆಕ್ಟ್ ಇರುತ್ತೆ. ಈಗ ಅಂಥದ್ದೇ ಮಿಂಚಿನಂಥಾ ಹೇಳಿಕೆಯೊಂದು ಮೋದಿ ಅವರಿಂದ ಬಂದಿದೆ. ದಿಲ್ಲಿಯಲ್ಲಿ ನವೀಕೃತ ಪ್ರಗತಿ ಮೈದಾನ ಲೋಕಾರ್ಪಣೆಗೊಳಿಸೋಕೆ ಅಂತ ಬಂದಿದ್ರ ಪ್ರಧಾನಿ ನರೇಂದ್ರ ಮೋದಿ, ಅದೇ ಕಾರ್ಯಕ್ರಮದಲ್ಲಿ ಮಾತಾಡ್ತಾ ಒಂದು ಮಾತು ಹೇಳಿದ್ದಾರೆ. ಆ ಮಾತು, ಅಲ್ಲಿದ್ದ ನೂರಾರು ಜನರನ್ನ ಮಂತ್ರಮುಗ್ಧಗೊಳಿಸಿತ್ತು. ಮೋದಿ ಅವರು ನನ್ನ ಮೂರನೇ ಅವಧಿಯಲ್ಲಿ ಅಂತ ಹೇಳ್ತಿದ್ದ ಹಾಗೆನೇ, ಅಲ್ಲಿ ನೆರೆದಿದ್ದ ಜನಸ್ತೋಮ ಕರತಾಡನ ಮಾಡಿತ್ತು. ಮೋದಿ ಅವರ ಆತ್ಮವಿಶ್ವಾಸ- ಗೆದ್ದೇ ಗೆಲ್ಲುವೆನೆಂಬ ಛಲ. ಅಲ್ಲಿದ್ದ ಜನರಿಗೆ ಒಂದರ್ಥದಲ್ಲಿ ಹುಚ್ಚುಹಿಡಿಸಿತ್ತು.

ಇದನ್ನೂ ವೀಕ್ಷಿಸಿ:  ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯಿಂದಲೇ ಕಳ್ಳಾಟ: ಕೈದಿಗಳಿಗೆ ಮೊಬೈಲ್ ಸಪ್ಲೈ ..!