'ಕೈ' ಶಾಸಕರಿಗೆ ಸಮೀಕ್ಷೆ ತಳಮಳ: ಎಕ್ಸಿಟ್ ಪೋಲ್ ನೋಡಿ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದ ಸಿಎಂ
ಲೋಕಸಭೆ ಎಕ್ಸಿಟ್ ಪೋಲ್ ಬಳಿಕ ಕಾಂಗ್ರೆಸ್ ಶಾಸಕರಲ್ಲಿ ಆತಂಕ
ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ಗೆ ಸಂಕಷ್ಟ ಎಂಬ ಭೀತಿ
ಆತಂಕದಲ್ಲಿರುವ ಕಾಂಗ್ರೆಸ್ ಶಾಸಕರಿಗೆ ಸಿಎಂ, ಡಿಸಿಎಂ ಅಭಯ
ಕಾಂಗ್ರೆಸ್ ಪಾಳಯದಲ್ಲಿ ಎಕ್ಸಿಟ್ ಪೋಲ್ ಭವಿಷ್ಯ(Exit polls result) ಸಂಚಲನವನ್ನು ಸೃಷ್ಟಿಸಿದಂತೆ ಕಾಣುತ್ತಿದೆ. ಲೋಕಸಭೆ ಎಕ್ಸಿಟ್ ಪೋಲ್ ಬಳಿಕ ಕಾಂಗ್ರೆಸ್(Congress) ಶಾಸಕರಲ್ಲಿ ಆತಂಕ ಶುರುವಾಗಿದ್ದು, ಮತ್ತೆ ಬಿಜೆಪಿ(BJP) ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ಗೆ ಸಂಕಷ್ಟ ಎಂಬ ಭೀತಿ ಎದುರಾಗಿದೆಯಂತೆ. ಹೀಗಾಗಿ ಆತಂಕದಲ್ಲಿರುವ ಕಾಂಗ್ರೆಸ್ ಶಾಸಕರಿಗೆ ಸಿಎಂ, ಡಿಸಿಎಂ ಅಭಯ ನೀಡಿದ್ದಾರೆ. ಸಿಎಲ್‌ಪಿ ಸಭೆಯಲ್ಲಿ ಶಾಸಕರಿಗೆ ಸಿಎಂ(Siddaramaiah), ಡಿಸಿಎಂ(DK Shivakumar) ಧೈರ್ಯವನ್ನು ಹೇಳಿದ್ದಾರಂತೆ. ಎಕ್ಸಿಟ್ ಪೋಲ್ ನೋಡಿ ಧೃತಿಗೆಡುವ ಅವಶ್ಯಕತೆ ಇಲ್ಲ. ಯಾರು ಏನೇ ಹೇಳಲಿ, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ ಹೇಳಿದ್ದಾರಂತೆ. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, ಕಾಂಗ್ರೆಸ್‌ಗೆ 14ರಿಂದ 18 ಸ್ಥಾನ, ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡಂಕಿ ದಾಟುತ್ತೇವೆ. ನಾವು ಮಾಹಿತಿ ತರಿಸಿಕೊಂಡಿದ್ದೇವೆ, ಡೋಂಟ್ ವರಿ ಎಂದು ಸಿಎಂ ಹೇಳಿದ್ದಾರಂತೆ.
ಇದನ್ನೂ ವೀಕ್ಷಿಸಿ: ಎಸ್ ಆರ್ ಪಾಟೀಲ್ ಪರ ದಿಂಗಾಲೇಶ್ವರ ಶ್ರೀ ಲಾಬಿ: ಶ್ರೀಗಳ 'ರಾಜಕೀಯ' ಆಡಿಯೋ ಸದ್ಯ ವೈರಲ್!