ಎಸ್ ಆರ್ ಪಾಟೀಲ್‌ ಪರ ದಿಂಗಾಲೇಶ್ವರ ಶ್ರೀ ಲಾಬಿ: ಶ್ರೀಗಳ 'ರಾಜಕೀಯ' ಆಡಿ‌ಯೋ ಸದ್ಯ ವೈರಲ್‌!

ಕಾಂಗ್ರೆಸ್ ವಿಧಾನಪರಿಷತ್‌ ಟಿಕೆಟ್ ಫೈನಲ್ ಆಗುತ್ತಿದ್ದಂತೆ ದಿಂಗಾಲೇಶ್ವರ ಶ್ರೀ ಮತ್ತು ಮಾಜಿ ಸಚಿವ ಎಸ್ ಆರ್ ಪಾಟೀಲ್‌ ಅವರದ್ದು ಎನ್ನಲಾದ ಆಡಿಯೋ ವೈರಲ್‌ ಆಗಿದೆ.
 

First Published Jun 3, 2024, 11:31 AM IST | Last Updated Jun 3, 2024, 11:32 AM IST

ಗದಗ: ಪರಿಷತ್ ಟಿಕೆಟ್‌ಗಾಗಿ ಮಾಜಿ ಸಚಿವ ಎಸ್ ಆರ್ ಪಾಟೀಲ್‌(SR Patil) ಪರ ದಿಂಗಾಲೇಶ್ವರ ಶ್ರೀ(Dingaleshwar Shri) ಲಾಬಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿರಹಟ್ಟಿಯ ದಿಂಗಾಲೇಶ್ವರ ಶ್ರೀಗಳ 'ರಾಜಕೀಯ' ಆಡಿ‌ಯೋ ಸದ್ಯ ವೈರಲ್‌ ಆಗಿದೆ. ದಿಂಗಾಲೇಶ್ವರ ಶ್ರೀಗಳು, ಮಾಜಿ ಸಚಿವ ಎಸ್ ಆರ್ ಪಾಟೀಲ್‌ ನಡುವಿನ ಸಂಭಾಷಣೆ ಆಡಿಯೋ ಇದಾಗಿದೆ. ಕಾಂಗ್ರೆಸ್(Congress) ಟಿಕೆಟ್ ಫೈನಲ್ ಆಗ್ತಿದ್ದಂತೆ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ಮಠದ ದಿಂಗಾಲೇಶ್ವರ ಶ್ರೀಗಳ ಜೊತೆ ಎಸ್ಆರ್ ಪಾಟೀಲ ಮಾತನಾಡಿರುವ ಆಡಿಯೋ ಇದಾಗಿದೆ. ಎಸ್ ಆರ್ ಪಾಟೀಲ, ಬಾಗಲಕೋಟೆಯ ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದಾರೆ. ಎಸ್ ಆರ್ ಪಾಟೀಲರಿಗೆ ಸ್ಥಾನ ಕಲ್ಪಿಸುವಂತೆ ಡಿಕೆಶಿಗೆ ಹೇಳಿರುವುದರ ಬಗ್ಗೆ ಶ್ರೀಗಳು ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ಶಿಷ್ಯನ ಮೊಬೈಲ್‌ಗೆ ಫೋನ್ ಮಾಡಿ ಶ್ರೀಗಳ ಜೊತೆ ಎಸ್ ಆರ್ ಪಾಟೀಲ ಮಾತನಾಡಿದ್ದಾರೆ. ಅಧ್ಯಕ್ಷರನ್ನ ಭೇಟಿಯಾಗಿದ್ದೇನೆ ಅಂತಾ ಹೇಳುವ ಮೂಲಕ ಶ್ರೀಗಳ ಜೊತೆ ಎಸ್ ಆರ್ ಪಾಟೀಲ ಮಾತು ಆರಂಭಿಸಿದ್ದಾರೆ.

ಇದನ್ನೂ ವೀಕ್ಷಿಸಿ:  6ನೇ ಬಾರಿ ಒಡಿಶಾದಲ್ಲಿ ಅಧಿಕಾರ ಹಿಡೀತಾರಾ ಪಟ್ನಾಯಕ್‌? ಬಿಜೆಪಿ-ಬಿಜೆಡಿ ಮಧ್ಯೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿ!

Video Top Stories