ಅಭ್ಯರ್ಥಿಗಳನ್ನು ಅಂತಿಮಪಡಿಸಲು ಹೆಣಗಾಡುತ್ತಿರುವ 'ಕೈ': ಸಭೆಯಲ್ಲಿ 21 ಅಭ್ಯರ್ಥಿಗಳ ಶಿಫಾರಸ್ಸಿನ ಬಗ್ಗೆ ನಿರ್ಣಯ ಸಾಧ್ಯತೆ !

ಸಚಿವರಿಗೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಕೊಡುವ ಬಗ್ಗೆ ನಿರ್ಣಯ..?
ಜಯಪ್ರಕಾಶ್ ಹೆಗ್ಡೆ ಸೇರಿ ನಾಯಕರ ಸೇರ್ಪಡೆ ದಿನಾಂಕ ತೀರ್ಮಾನ ಸಾಧ್ಯತೆ
ಹಿರಿಯ ನಾಯಕರ ಸಭೆಯ ತೀರ್ಮಾನ ಕುರಿತು ಕಾಂಗ್ರೆಸ್ ಪಡೆಯಲ್ಲಿ ಕುತೂಹಲ
 

Share this Video
  • FB
  • Linkdin
  • Whatsapp

ಕಾಂಗ್ರೆಸ್‌ನಲ್ಲಿ ಲೋಕಸಭಾ ಚುನಾವಣಾ(Loksabha) ಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಜೋರಾಗಿದೆ. 21 ಕ್ಷೇತ್ರಗಳಿಗೆ ಅಭ್ಯರ್ಥಿ(Candidates) ಅಂತಿಮಪಡಿಸಲು ಕಾಂಗ್ರೆಸ್(Congress) ಹೆಣಗಾಡುತ್ತಿದೆ. ಅಭ್ಯರ್ಥಿಗಳನ್ನು ಶಿಫಾರಸಿಗೆ ಇಂದು ಬೆಂಗಳೂರಿನಲ್ಲಿ(Bengaluru) ಹಿರಿಯ ನಾಯಕರ ಸಭೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಭಾಗಿಯಾಗಲಿದ್ದಾರೆ. ಸಭೆಯಲ್ಲಿ 21 ಅಭ್ಯರ್ಥಿಗಳನ್ನು ಶಿಫಾರಸು ಮಾಡುವ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಸಚಿವ ಹೆಚ್ ಸಿ ಮಹಾದೇವಪ್ಪ, ಕೆ.ಹೆಚ್ ಮುನಿಯಪ್ಪ ಕಣಕ್ಕಿಳಿಸಲು ಲೆಕ್ಕಾಚಾರ ಮಾಡಲಾಗಿದ್ದು, ಇಂದಿನ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಚಿವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಸಾಧ್ಯತೆ ಬಗ್ಗೆ ಸಮಾಲೋಚನೆ ನಡೆಯಲಿದೆ. ಬಳ್ಳಾರಿ, ಬೆಳಗಾವಿ, ಚಿಕ್ಕೋಡಿ ಕ್ಷೇತ್ರದಲ್ಲಿ ಸಚಿವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬಹುದು ಎನ್ನಲಾಗ್ತಿದೆ. 

ಇದನ್ನೂ ವೀಕ್ಷಿಸಿ:  PM southern states Tour: ಲೋಕ ಸಮರ ಗೆಲ್ಲಲು ಮತ್ತೆ ‘ನಮೋ’ ದಕ್ಷಿಣ ದಂಡಯಾತ್ರೆ: ಮಾ.15ರಿಂದ ಪ್ರಧಾನಿ ಪ್ರವಾಸ

Related Video