ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ, ಕಾಂಗ್ರೆಸ್ ಪರ್ಸೆಂಟೇಜ್ ಸರ್ಕಾರ ಅದರಲ್ಲಿ ಅನುಮಾನ ಬೇಡ!
ಜನರಿಗೆ ಈ ಸರ್ಕಾರ ಮಾತು ಕೊಟ್ಟಿದೆ. ವೋಟ್ ಬೇಕು ಎನ್ನುವ ಸಲುವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಈಗ ಅದನ್ನು ಪೂರೈಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಜೂ.22): ನಮ್ಮ ರಾಜ್ಯ ಸಂಪತ್ಭರಿತ ರಾಜ್ಯ. ಇಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. ಆದರೆ, ಸರ್ಕಾರಕ್ಕೆ ಬೇಕಾಗಿರುವುದು ಅಕ್ಕಿಯಲ್ಲ. ಪರ್ಸಂಟೇಜ್. ಯಾವ ರಾಜ್ಯದಿಂದ ಅಕ್ಕಿ ಖರೀದಿ ಮಾಡಿದರೆ ಪರ್ಸಂಟೇಜ್ ಹೆಚ್ಚು ಸಿಗುತ್ತದೆ ಅಂತಾ ಕಾಯ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಅಕ್ಕಿ ಘೋಷಣೆ ಮಾಡುವಾಗ ಜ್ಞಾನ ಇರಲಿಲ್ವೇ? ಕಾಂಗ್ರೆಸ್ ಉಚಿತ ಗ್ಯಾರೆಂಟಿ ವಿರುದ್ಧ ಹೆಚ್‌ಡಿಕೆ ಗರಂ!
ಇದು ಪರ್ಸಂಟೇಜ್ ಸರ್ಕಾರ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ವೋಟ್ ಹಾಕಿಸಿಕೊಳ್ಳಲು ರಾಜ್ಯದ ಜನರಿಗೆ 10 ಕೆಜಿ ಅಕ್ಕಿಯ ಮಾತು ಕೊಟ್ಟಿದೆ. ಕೇಂದ್ರ ಸರ್ಕಾರಕ್ಕೆ ಕೇಳಿ ಏನಾದ್ರೂ ಭರವಸೆ ಕೊಟ್ಟಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.