ಅಕ್ಕಿ ಘೋಷಣೆ ಮಾಡುವಾಗ ಜ್ಞಾನ ಇರಲಿಲ್ವೇ? ಕಾಂಗ್ರೆಸ್ ಉಚಿತ ಗ್ಯಾರೆಂಟಿ ವಿರುದ್ಧ ಹೆಚ್‌ಡಿಕೆ ಗರಂ!
ಒಂದು ತಿಂಗಳನಿಂದ ಕಾಂಗ್ರೆಸ್ ಡ್ರಾಮ, ಅಕ್ಕಿ ಭಾಗ್ಯ ವಿರುದ್ದ ಕುಮಾರಸ್ವಾಮಿ ಕೆಂಡಾಮಂಡಲ, ಹಿರಿಯರ ಹೊಂದಾಣಿಕೆ ಒಪ್ಪಿಕೊಂಡ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್, ಅನ್ನಭಾಗ್ಯ ಅಕ್ಕಿ ರಾಜಕೀಯ ದೆಹಲಿಗೆ ಶಿಫ್ಟ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಾಂಗ್ರೆಸ್ ಉಚಿತ ಭಾಗ್ಯದ ವಿರುದ್ದ ಹೆಚ್‌ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. 10 ಕೆಜಿ ಅಕ್ಕಿ ಕೊಡ್ತೀವಿ ಎಂದು ಕಾಂಗ್ರೆಸ್ ಘೋಷಣೆ ಮಾಡಿದಾಗ, ಸಮಸ್ಯೆಗಳ ಅರಿವು ಇರಲಿಲ್ಲವೇ? ಎಫ್‌ಸಿಗೆ ಪತ್ರ ಬರೆದಿದ್ದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಇದು ಉಡಾಫೆ ಮಾತು. ಕೇಂದ್ರದ ಇಲಾಖೆ ಜೊತೆ ಸಿಎಂ ಅಥವಾ ಜವಾಬ್ದಾರಿಯುತ ಮಂತ್ರಿ ಕಳುಹಿಸಿ ಚರ್ಚೆ ನಡೆಸಬೇಕಿತ್ತು. ಕೇಂದ್ರಕ್ಕೆ ಅವರದ್ದೇ ಆದ ಕಮಿಟ್‌ಮೆಂಟ್ ಇದೆ. ನೀವು ಕೇಳಿದ ತಕ್ಷಣ ಅವರು ಯಾಕೆ ಕೊಡುತ್ತಾರೆ. ಜನತೆಗೆ ನೀವು ಮಾತು ಕೊಟ್ಟಿದ್ದೀರಿ. ನೀವು ಹೇಗಾದರು ಮಾಡಿ ಕೊಡಬೇಕು. ಇದೀಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಲು ನಿಮಗೇನು ಹಕ್ಕಿದೆ? ಯಾವನೋ ಬಂದು ಚುನಾವಣೆ ತಂತ್ರ ಮಾಡಿದ್ದಾನೆ. ಇವರು ಘೋಷಣೆ ಮಾಡಿ ಈಗ ಡ್ರಾಮ ಆಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.