Asianet Suvarna News Asianet Suvarna News

ಕೋಲಾರದಲ್ಲಿ ಬೇಡ ಬೇಡ, ಬಾದಾಮಿ ದೂರ ದೂರ, ಎಲ್ಲಿ ಮಾಡುಮಾ, ಸ್ಪರ್ಧೆ ಎಲ್ಲಿ ಮಾಡುಮಾ?

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯಲು ಕಾರಣವೇನು?ದೇವಿ ಸೂಚನೆಯಂತೆ ಎರಡು ಕಡೆ ಸ್ಪರ್ಧೆ ಮಾಡ್ತಾರ ಸಿದ್ದರಾಮಯ್ಯ?ಸಿದ್ದರಾಮಯ್ಯನವರಿಗೆ ಕ್ಷೇತ್ರ ಬಿಟ್ಟು ಅತಂತ್ರರಾದ ಶ್ರೀನಿವಾಸ್ ಗೌಡ, ಸಿದ್ದು ಎಲ್ಲಿ ನಿಂತರೂ ಸೋಲುತ್ತಾರೆ, ಕಾಂಗ್ರೆಸ್ ಕುಟುಕಿದ ಬಿಜೆಪಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ಕಂಪ್ಲೀಟ್ ಪ್ಯಾಕೇಜ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಎದುರಾಗಿದ್ದ ಕ್ಷೇತ್ರ ಗೊಂದಲ ಇದೀಗ ಮತ್ತೆ ಬಂದಿದೆ. ಬಾದಾಮಿ ದೂರ ಅನ್ನೋ ಕಾರಣ ನೀಡಿದ್ದರು. ಇತ್ತ ಸಿದ್ದರಾಮಯ್ಯ ಕೋಲಾರದಲ್ಲಿ ನಾಲ್ಕೈದು ಬಾರಿ ಭೇಟಿ ನೀಡಿ ಕೊನೆಗೆ ಅಂತಿಮ ಘೋಷಣೆ ಮಾಡಿದ್ದರು. ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದಿದ್ದರು. ಹೀಗಾಗಿ ಕೋಲಾರ ರಾಜಕೀಯ ರಂಗೇರಿತ್ತು. ಆದರೆ ಕೋಲಾರದಲ್ಲಿ ಕಾಂಗ್ರೆಸ್ ನಡೆಸಿದ ಸಮೀಕ್ಷೆಗಳು ಸಿದ್ದರಾಮಯ್ಯ ಪರವಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕೋಲಾರದಿಂದ ಸ್ಪರ್ಧೆ ಬೇಡ ಎನ್ನುತ್ತಿದೆ. ಸೋಲಿನ ಆತಂಕದಿಂದ ಇದೀಗ ಸಿದ್ದರಾಮಯ್ಯ ಯು ಟರ್ನ್ ಹೊಡೆದಿದ್ದಾರೆ. ಕೋಲಾರ ಸ್ಪರ್ಧೆಯಿಂದ ದೂರ ಉಳಿದದಿದ್ದಾರೆ. ಇದೀಗ ಸಿದ್ದರಾಮಯ್ಯ ಕ್ಷೇತ್ರ ಯಾವುದು ಅನ್ನೋ ಪ್ರಶ್ನೆ ಮತ್ತೆ ಶುರುವಾಗಿದೆ. ಮಾಜಿ ಸಿಎಂಗೆ ಕ್ಷೇತ್ರವೇ ಇಲ್ಲದಾಗಿದೆ. ಎಲ್ಲಿ ನಿಂತರೂ ಸೋಲುತ್ತಾರೆ ಎಂದು ಬಿಜೆಪಿ ಕುಟುಕಿದೆ. ಇತ್ತ ಸಿದ್ದರಾಮಯ್ಯ ಪುತ್ರನ ವರುಣಾ ಕ್ಷೇತ್ರಕ್ಕೆ ಹೈಕಾಕಲು ನಿರಾಕರಿಸಿದ್ದಾರೆ. ಸಿದ್ದರಾಮಯ್ಯನವರ ಕೆಲ ಆಯ್ಕೆಗಳಲ್ಲಿ ಬಾದಾಮಿ, ಸವದತ್ತಿ ಹಾಗೂ ಚಾಮರಾಜಪೇಟೆ ಪ್ರಮುಖವಾಗಿದೆ. ಹೀಗಾಗಿ ಸಿದ್ದು ಸ್ಪರ್ಧೆ ಎಲ್ಲಿಂದ ಅನ್ನೋ ಪ್ರಶ್ನೆಗೆ ಉತ್ತರ ಸಿಕಿಲ್ಲ. ಗೊಂದಲ ಮುಂದುವರಿದಿದೆ.

Video Top Stories