Congress Campaign: ಲೋಕಸಭಾ ಅಖಾಡದಲ್ಲಿ ಪ್ರಚಾರಕ್ಕೆ ಕಾಂಗ್ರೆಸ್ ಕಿಕ್‌ಸ್ಟಾರ್ಟ್: ಪ್ರಜಾಧ್ವನಿ 2.O ಹೆಸರಿನಲ್ಲೇ ನಾಳೆ ಪ್ರಚಾರ
ಕೋಲಾರದ ಕುರುಡುಮಲೆ ದೇವಸ್ಥಾನದಲ್ಲಿ ಪ್ರಚಾರಕ್ಕೆ ಚಾಲನೆ
ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಿರುವ ಸಿಎಂ, ಡಿಸಿಎಂ
ನಾಳೆ ಕೋಲಾರದ ಮುಳಬಾಗಿಲು ಕ್ಷೇತ್ರದಲ್ಲಿ ರೋಡ್ ಶೋ
ಲೋಕಸಭಾ ಅಖಾಡದಲ್ಲಿ ಪ್ರಚಾರಕ್ಕೆ ಕಾಂಗ್ರೆಸ್ ಕಿಕ್‌ಸ್ಟಾರ್ಟ್ ನೀಡಿದ್ದು, ನಾಳೆ ಚುನಾವಣಾ ಪ್ರಚಾರಕ್ಕೆ(Election Campaign) ಅಧಿಕೃತವಾಗಿ ರಣಕಹಳೆ ಮೊಳಗಿಸಲಿದೆ. ಕೋಲಾರದ(Kolar) ಕುಡುರುಮಲೆ ದೇವಸ್ಥಾನದಿಂದ ಪ್ರಚಾರಕ್ಕೆ ಚಾಲನೆ ದೊರೆಯಲಿದೆ. ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿಕೆ ಶಿವಕುಮಾರ್‌ರಿಂದ(DK Shivakumar) ಪ್ರಚಾರಕ್ಕೆ ಚಾಲನೆ ದೊರೆಯಲಿದೆ. ಪ್ರಜಾಧ್ವನಿ 2.O ಹೆಸರಿನಲ್ಲೇ ಚುನಾವಣಾ ಪ್ರಚಾರವನ್ನು ಈ ಬಾರಿ ಕಾಂಗ್ರೆಸ್ ನಡೆಸಲಿದೆ. ಬೆಂಗಳೂರಿನಿಂದ ಒಟ್ಟಿಗೆ ತೆರಳಿರುವ ಸಿಎಂ, ಡಿಸಿಎಂ ಹಾಗೂ ರಾಜ್ಯ ಕಾಂಗ್ರೆಸ್(Congress) ನಾಯಕರು. ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಪ್ರಚಾರ ನಡೆಯಲಿದೆ. ಲೋಕಸಭಾ ಕ್ಷೇತ್ರದಲ್ಲಿ ಒಗ್ಗಟ್ಟಿನ ಪ್ರಚಾರ ಮಾಡಲಿರುವ ಸಿಎಂ, ಡಿಸಿಎಂ. ಅವಶ್ಯಕತೆ ಇರುವ ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಪ್ರತ್ಯೇಕ ಪ್ರಚಾರ ಮಾಡಲಿದ್ದಾರೆ. ಒಂದು ದಿನಕ್ಕೆ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ(Congress Campaign) ಮಾಡಲು ಪ್ಲ್ಯಾನ್ ಮಾಡಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ. ಕೇಂದ್ರ ಸರ್ಕಾರ ವೈಫಲ್ಯ, ತೆರಿಗೆ ಅನ್ಯಾಯ, ಅನುದಾನ ತಾರತಮ್ಯ ಪ್ರಮುಖ ವಿಷಯವಾಗಿವೆ.
ಇದನ್ನೂ ವೀಕ್ಷಿಸಿ: India TV-CNX , Times Now Survey: ಕಾಂಗ್ರೆಸ್ v/s ಬಿಜೆಪಿ-ಜೆಡಿಎಸ್ ಮೈತ್ರಿ..ಯಾರಿಗೆ ಎಷ್ಟು ಸ್ಥಾನ..?