
ಸಿದ್ದು ಬತ್ತಳಿಕೆಯಿಂದ ಸಿಡಿಯಿತು ಗ್ಯಾರಂಟಿ ಅಸ್ತ್ರ.. ರೈತಾಸ್ತ್ರ: ಹೇಗಿದೆ ಗೊತ್ತಾ “ಬಜೆಟ್”ರಾಮಯ್ಯ ಹೆಣೆದ “ಲೋಕ”ವ್ಯೂಹ..?
14ನೇ ಬಜೆಟ್ ಮಂಡಿಸಿ ದಾಖಲೆ ಬರೆದರು ಸಿಎಂ ಸಿದ್ದರಾಮಯ್ಯ..!
ಟಾರ್ಗೆಟ್ ಬಿಜೆಪಿ.. ಟಾರ್ಗೆಟ್ ಲೋಕಸಭೆ.. ಟಾರ್ಗೆಟ್ ಮಿಷನ್ 20
ಲೋಕಯುದ್ಧಕ್ಕೆ "ತಂತ್ರ"ರಾಮಯ್ಯನ ರಣವ್ಯೂಹದ ಗುಟ್ಟು ರಟ್ಟು..!
ದಾಖಲೆಯ 14ನೇ ಬಜೆಟ್‌ನನ್ನು ಸಿಎಂ ಸಿದ್ದರಾಮಯ್ಯ(Siddaramaiah) ಮಂಡಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ(Loksabha election) ಗೆಲ್ಲಲು ಲೆಕ್ಕರಾಮಯ್ಯನ ಲೆಕ್ಕವ್ಯೂಹ ರೆಡಿಯಾಗಿದೆ. ನೂರು ಕುರಿ ಲೆಕ್ಕ ಹಾಕಲು ಬಾರದವ ಎಂದು ಹೀಯಾಳಿಸಿದವರ ಮುಂದೆಯೇ ರಾಜ್ಯದಲ್ಲೇ ಅತೀ ಹೆಚ್ಚು ಬಾರಿ ಬಜೆಟ್(Budget) ಮಂಡಿಸಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯ ಗೆದ್ದು ರಾಜ್ಯಾಧಿಕಾರ ದಂಡ ಹಿಡಿದಿರೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದಿನ ಟಾರ್ಗೆಟ್ ಮಹಾಭಾರತ ಯುದ್ಧ. ಅಂದ್ರೆ ಮುಂದಿನ ವರ್ಷ ನಡೆಯೋ ಲೋಕಸಭಾ ಚುನಾವಣೆ. ಲೋಕಸಂಗ್ರಾಮಕ್ಕೆ ಸಮರರಾಮಯ್ಯ, ಬಜೆಟ್'ನಲ್ಲೇ ಸಮರಶಂಖ ಊದಿದ್ದಾರೆ. ಪ್ರಧಾನಿ ಮೋದಿಗೆ, ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಬಜೆಟ್'ನಲ್ಲೇ ಟಕ್ಕರ್ ಕೊಟ್ಟಿದ್ದಾರೆ. ಮತ್ತೊಂದ್ಕಡೆ ಲೋಕಕಾಳಗಕ್ಕೆ ಬಜೆಟ್ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಇದನ್ನೂ ವೀಕ್ಷಿಸಿ: Kichcha Sudeep: ವಂಚನೆ ಆರೋಪ ಮಾಡಿದ ನಿರ್ಮಾಪಕರು: ಕಾನೂನು ಹೋರಾಟಕ್ಕೆ ಸುದೀಪ್ ಸಜ್ಜು