Kichcha Sudeep: ವಂಚನೆ ಆರೋಪ ಮಾಡಿದ ನಿರ್ಮಾಪಕರು: ಕಾನೂನು ಹೋರಾಟಕ್ಕೆ ಸುದೀಪ್‌ ಸಜ್ಜು

ವಂಚನೆ ಆರೋಪ ಮಾಡಿದ ನಿರ್ಮಾಪಕರಿಗೆ ನೋಟಿಸ್‌ ಕಳಿಸಿರುವ ಸುದೀಪ್, 10 ಕೋಟಿ ಮಾನನಷ್ಟೆ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ನಟ ಕಿಚ್ಚ ಸುದೀಪ್‌ (Kichcha Sudeep) ವಿರುದ್ಧ ವಂಚನೆ ಆರೋಪ ಮಾಡಲಾಗಿತ್ತು. ಇದರ ವಿರುದ್ಧ ಸುದೀಪ್‌ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೇ ಆರೋಪ ಮಾಡಿದವರ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮ್ಮೆ ಹೂಡುವ ಎಚ್ಚರಿಕೆ ನೀಡಿದ್ದಾರೆ. ನಿರ್ಮಾಪಕ ಎನ್‌.ಕುಮಾರ್‌, ಎನ್‌.ಎಂ. ಸುರೇಶ್‌ಗೆ(MN Suresh) ನೋಟಿಸ್‌ (Notice) ನೀಡಲಾಗಿದೆ. ಅಡ್ವಾನ್ಸ್‌ ಪಡೆದು ಕಾಲ್‌ ಶೀಟ್‌ ನೀಡಿಲ್ಲ ಎಂದು ಸುದೀಪ್ ಮೇಲೆ ಆರೋಪ ಮಾಡಲಾಗಿತ್ತು. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡರೇ ಸುದೀಪ್ ಅವರೇ ಕಾರಣ ಎಂದು ನಿರ್ಮಾಪಕರು(Producers) ಹೇಳಿದ್ದರು. ನನ್ನ ತಾಳ್ಮೆ ಪರೀಕ್ಷಿಸುತ್ತಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತುಪಡಿಸಿ. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೋಟಿಸ್‌ ತಲುಪಿದ ಕೂಡಲೇ ಅದಕ್ಕೆ ಪ್ರತ್ಯುತ್ತರ ಕಳುಹಿಸಿ ಎಂದು ನಟ ಸುದೀಪ್‌ ಲಾಯರ್‌ ನೋಟಿಸ್‌ ಕಳುಹಿಸಿದ ಬಳಿಕ ಹೇಳಿದ್ದಾರೆ. 

Related Video