ಸಿಎಂ ಡಿನ್ನರ್ ಪಾಲಿಟಿಕ್ಸ್: ಸಚಿವರಲ್ಲಿ ಶುರುವಾದ ತಳಮಳ! ಯಾರಿಗೆ ಕೊಕ್?

ಹೈಕಮಾಂಡ್ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಸಚಿವರಿಗೆ ಡಿನ್ನರ್ ಮೀಟಿಂಗ್ ಕರೆದಿದ್ದಾರೆ. ಬಿಹಾರ ಚುನಾವಣೆ ಪ್ರಚಾರದ ಬಗ್ಗೆ ಚರ್ಚಿಸುವುದು ಅಧಿಕೃತ ಅಜೆಂಡಾವಾಗಿದ್ದರೂ, ಸಂಪುಟ ಪುನಾರಚನೆಯ ತೀವ್ರ ಚರ್ಚೆಯ ನಡುವೆ ಈ ಸಭೆ ನಡೆಯುತ್ತಿರುವುದು ಸಚಿವರಲ್ಲಿ ತಳಮಳ ಸೃಷ್ಟಿಸಿದೆ.

Share this Video
  • FB
  • Linkdin
  • Whatsapp

ಬಂಡಿಗಣಿ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂಬ ಡಿಕೆಶಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಶಾಸಕರ ಬೆಂಬಲ ಇಲ್ಲದೇ ಯಾರೂ ಮುಖ್ಯಮಂತ್ರಿ ಆಗೋಕೆ ಆಗಲ್ಲ. ಬಹುಮತ ಇದ್ರೆ ಆಗೋದು, ಹೈಕಮಾಂಡ್ ಆಶೀರ್ವಾದವೂ ಬೇಕು ಎಂದು ಅವರು ತಿಳಿಸಿದರು.

Related Video