Asianet Suvarna News Asianet Suvarna News

ಬಿಹಾರದಲ್ಲಿ ರಾಜಕೀಯ ತಲ್ಲಣ, ಬಿಜೆಪಿ ಮೈತ್ರಿ ಮುರಿದು ರಾಜ್ಯಪಾಲ ಭೇಟಿ ಮಾಡಲು ಮುಂದಾದ ನಿತೀಶ್-ತೇಜಸ್ವಿ!

ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಅಂತಿಮ ಹಂತಕ್ಕೆ ತಲುಪಿದೆ. ಮೈತ್ರಿ ಮುರಿಯಲು ಇಚ್ಚಿಸಿರುವ ಜೆಡಿಯು ಇದೀಗ ಆರ್‌ಜೆಡಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದೆ. ಇದಕ್ಕಾಗಿ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದಾರೆ.

Aug 9, 2022, 2:21 PM IST

ಪಾಟ್ನಾ(ಆ.09): ಒಂದೊಂದೆ ರಾಜ್ಯಗಳನ್ನು ಆಕ್ರಮಿಸಿಕೊಳ್ಳುತ್ತಿದ್ದ ಬಿಜೆಪಿಗೆ ಬಿಹಾರದಲ್ಲಿ ತಿರುಗುಬಾಣವಾಗಿದೆ. ಜೆಡಿಯು ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿರುವ ಬಿಜೆಪಿಗೆ ತಲೆನೋವು ಶುರುವಾಗಿದೆ. ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಳ್ಳಲು ಮುಂದಾಗಿರುವ ನಿತೀಶ್ ಕುಮಾರ್ ನೇತತ್ವದ ಜೆಡಿಯು, ಆರ್‌ಜೆಡಿ ಜೊತೆ ಹೊಸ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಇದಕ್ಕಾಗಿ ರಾಜ್ಯಾಪಾಲ ಭೇಟಿಗೆ ಅವಕಾಶ ಕೇಳಲಾಗಿದೆ. ತೇಜಸ್ವಿ ಯಾದವ್ ಜೊತೆ ರಾಜ್ಯಪಾಲರ ಭೇಟಿಯಾಗುವ ಸಾಧ್ಯತೆ ಇದೆ.