ತಮ್ಮ ಕೆಜಿಎಫ್ ಸಿನಿಮಾದ ಬಿಡುಗಡೆ ಸಮಯದಿಂದ ಈ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾ ಬಿಡುಗಡೆ ವೇಳೆ ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದ ನಟ ಯಶ್ ಅವರು, ಟಾಕ್ಸಿಕ್ ಸಿನಿಮಾದ ಮಹೂರ್ತದ ಸಮಯದಲ್ಲೂ ಹೋಗಿ ಭೇಟಿಯಾಗಿದ್ದರು.

Ahead of the release of his movie 'Toxic' tomorrow, Yash visited Dharmasthala-ನಾಳೆ ಬಿಡುಗಡೆ ಆಗಲಿರುವ ತಮ್ಮ ಟಾಕ್ಸಿಕ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ, ಧರ್ಮಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್!

ಕನ್ನಡ ನಟ, ಇದೀಗ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇಂದು, ಅಂದರೆ 25 ಆಗಸ್ಟ್ 2026ರಂದು ಕರ್ನಾಟಕದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಳೆ, 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ತಮ್ಮ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಟ ಯಶ್ ಅವರು ಧರ್ಮಸ್ಥಳಕ್ಕೆ ಆಗಮಿಸಿ ಸಂಪ್ರದಾಯಬದ್ಧ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೆಜಿಎಫ್ ಸಿನಿಮಾದ ಬಿಡುಗಡೆ ಸಮಯದಿಂದಲೂ ಈ ಸಂಪ್ರದಾಯ ಪಾಲನೆ

ನಟ ಯಶ್ ಅವರು ತಮ್ಮ ಕೆಜಿಎಫ್ ಸಿನಿಮಾದ ಬಿಡುಗಡೆ ಸಮಯದಿಂದ ಈ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾ ಬಿಡುಗಡೆ ವೇಳೆ ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದ ನಟ ಯಶ್ ಅವರು, ಟಾಕ್ಸಿಕ್ ಸಿನಿಮಾದ ಮಹೂರ್ತದ ಸಮಯದಲ್ಲೂ ಹೋಗಿ ಭೇಟಿಯಾಗಿದ್ದರು. ಇದೀಗ ತಮ್ಮ ಟಾಕ್ಸಿಕ್ ಸಿನಿಮಾದ ರಿಲೀಸ್ ಸಮಯದಲ್ಲೂ ಮತ್ತೆ ಅಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ.

ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಟ ಯಶ್ ಉಜಿರೆಯ 'ಸೂರ್ಯ ದೇವಸ್ಥಾನ'ಕ್ಕೂ ಭೇಟಿ

ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಟ ಯಶ್ ಅವರು ಉಜಿರೆಯ 'ಸೂರ್ಯ ದೇವಸ್ಥಾನ'ಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲಿಯೂ ಕೂಡ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಲಿದ್ದಾರೆ ನಟ ಯಶ್. ಬಳಿಕ ಅವರು ಟಾಕ್ಸಿಕ್ ಬಿಡುಗಡೆ ಕೆಲಸದಲ್ಲಿ ಮತ್ತೆ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಾಳೆ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾದ ಬಿಡುಗಡೆ ಜಗತ್ತಿನಾದ್ಯಂತ ನಡೆಯಲಿದೆ. ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ಕಡೆ ನಾಳೆ ಬೆಳಿಗ್ಗೆ 6-00 ಗಂಟೆಗೆ ಮೊದಲ ಶೋ ಶುರುವಾಗಲಿದೆ ಎಂಬ ಮಾಹಿತಿ ಬಂದಿದೆ.

ಅಂದಹಾಗೆ, ಜಗತ್ತಿನಾದ್ಯಂತ ಟಾಕ್ಸಿಕ್ ಸಿನಿಮಾ 12 ಸಾವಿರಕ್ಕಿಂತ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲಿ 500 ಕ್ಕೂ ಹೆಚ್ಚು ತೆರೆಗಳಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಿಡುಗಡೆ ಕಾಣಲಿದ್ದು, ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ಒಟ್ಟಿನಲ್ಲಿ, ನಾಳೆಯಿಂದ ಕನ್ನಡನಾಡು ಸೇರಿದಂತೆ ಭಾರತ ಹಾಗೂ ಜಗತ್ತಿನಾದ್ಯಂತ ಕನ್ನಡಿಗ ಯಶ್ ಅವರನ್ನು 'ಪ್ಯಾನ್ ವರ್ಲ್ಡ್ ಸ್ಟಾರ್' ಮಾಡುತ್ತಿರುವ ಟಾಕ್ಸಿಕ್ ಸಿನಿಮಾದ ಹಬ್ಬ ಶುರುವಾಗಲಿದೆ.