ಸಿಎಂ ಬೊಮ್ಮಾಯಿ ಅಬ್ಬರದ ಪ್ರಚಾರ: ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ
ಇಂದಿನಿಂದ ಸಿಎಂ ಬೊಮ್ಮಾಯಿ ರೋಡ್ ಶೋ ಆರಂಭ
ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಿಎಂ
260 ಕಿ.ಮೀ ರೋಡ್ ಶೋ ನಡೆಸಲಿರುವ ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಬ್ಬರದ ಪ್ರಚಾರ ಶುರುವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಜಯ ವಾಹಿನಿ ಹೆಸರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಸಿಎಂ ಮಾಲಾರ್ಪಣೆ ಮಾಡಿದ್ದು, ಯಲಹಂಕದಿಂದ ರೋಡ್ ಶೋ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು. ಇಂದು ಒಂದೇ ದಿನ 9 ಕ್ಷೇತ್ರಗಳಲ್ಲಿ ಸಿಎಂ ರೋಡ್ ಶೋ ನಡೆಸಲಿದ್ದಾರೆ. ಒಟ್ಟಾರೆ 260 ಕಿಲೋ ಮೀಟರ್ ರೋಡ್ ಶೋನನ್ನು ಸಿಎಂ ಮಾಡಲಿದ್ದಾರೆ.
ಇದನ್ನೂ ವೀಕ್ಷಿಸಿ: ವಿಧಾನಸಭೆ ಸಮರಕ್ಕೂ ಮುನ್ನ ಹೊರಬಿತ್ತು ಲೋಕಸಭೆ ಯುದ್ಧದ ಮಹಾ ಸಮೀಕ್ಷೆ..ಮತ್ತೆ ಗೆಲ್ತಾರಾ ಮೋದಿ..?