ಕಾಂಗ್ರೆಸ್‌ ಹಿಂದೂಗಳನ್ನು ತುಳಿಯುವ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್‌
ಸಂಜೆ 7ಕ್ಕೆ ಎಲ್ಲಾ ದೇಗುಲಗಳಲ್ಲಿ ಹನುಮನ ಜಪ
ಕಾಂಗ್ರೆಸ್‌ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ

Share this Video
  • FB
  • Linkdin
  • Whatsapp

ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಜರಂಗದಳವನ್ನು ಬ್ಯಾನ್‌ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಹಿನ್ನೆಲೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳು ನಿಮಗೆ ಏನು ಮಾಡಿದ್ರು ? ಕಾಂಗ್ರೆಸ್‌ ತಂಟೆಗೆ ಬಂದಿದ್ರಾ ?. ಕಾಂಗ್ರೆಸ್‌ ಹಿಂದೂಗಳನ್ನು ತುಳಿಯುವ ಕೆಲಸ ಮಾಡ್ತಿದೆ. ಅಲ್ಲದೇ ಅವರ ಅವಧಿಯಲ್ಲಿ ಪಿಎಫ್ಐ ಕೇಸ್‌ಗಳನ್ನು ವಾಪಸ್‌ ಪಡೆಯಲಾಯಿತು. ಆದ್ರೆ ಇದೀಗ ಪಿಎಫ್ಐ ಬ್ಯಾನ್‌ ಮಾಡುತ್ತೇವೆ ಅಂತಿದ್ದೀರಿ. ಈಗಾಗಲೇ ಕೇಂದ್ರ ಸರ್ಕಾರ ಅದನ್ನು ಬ್ಯಾನ್‌ ಮಾಡಿದೆ. ಸಂಜೆ 7ಕ್ಕೆ ಹನುಮಾನ್‌ ಚಾಲೀಸಾ ಪಠಣ ಮಾಡೇ ಮಾಡ್ತೇವೆ ಎಂದು ಸೂಲಿಬೆಲೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಹಿಂದೂಪರ ಸಂಘಟನೆಗಳು ಇಂದು ರಾಜ್ಯಾದ್ಯಂತ ಎಲ್ಲಾ ದೇಗುಲಗಳಲ್ಲಿ ಸಂಜೆ 7ಕ್ಕೆ ಹನುಮಾನ್‌ ಚಾಲೀಸಾ ಪಠಿಸಲು ಕರೆ ನೀಡಿವೆ.

ಇದನ್ನೂ ವೀಕ್ಷಿಸಿ: ಭಜರಂಗದಳ ಬ್ಯಾನ್‌ ನಿರ್ಧಾರಕ್ಕೆ ಬದ್ದ ಎಂದ ಕಾಂಗ್ರೆಸ್‌: ಹೆಚ್ಚಾಗುತ್ತಾ ಕಾರ್ಯಕರ್ತರ ಆಕ್ರೋಶ ?

Related Video