Lok Sabha : ಇಂದು ಕಾಂಗ್ರೆಸ್‌ನ ಮೊದಲ ಕೇಂದ್ರ ಚುನಾವಣಾ ಸಮಿತಿ ಸಭೆ: 150 ಕ್ಷೇತ್ರಗಳ ಟಿಕೆಟ್ ಘೋಷಣೆಗೆ ಪ್ಲ್ಯಾನ್ !
ಎರಡು, ಮೂರು ಹಂತಗಳಲ್ಲಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ
ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮೊದಲ ಹಂತದಲ್ಲಿ
ರಾಜ್ಯದ 10-15 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ
ಲೋಕಸಭೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಸನ್ನಿಹಿತವಾಗುತ್ತಿದೆ. ಕಾಂಗ್ರೆಸ್‌ನ(Congress) ಮೊದಲ ಕೇಂದ್ರ ಚುನಾವಣಾ ಸಮಿತಿ ಸಭೆ, ಇಂದು ಸಂಜೆ 6ಕ್ಕೆ ನಡೆಯಲಿದೆ. ದೆಹಲಿಯಲ್ಲಿ(Delhi) ಕಾಂಗ್ರೆಸ್ ಕೇಂದ್ರ ಸಮಿತಿ ಸಭೆ ಅಯೋಜನೆ ಮಾಡಲಾಗಿದೆ. ಟಿಕೆಟ್ ಫೈನಲ್‌ಗೆ ಸಿಎಂ, ಡಿಸಿಎಂ ಇಂದು ದೆಹಲಿ ಪ್ರಯಾಣ ಬೆಳೆಸಲಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಹೆಸರಿನ ಪಟ್ಟಿ ಹಿಡಿದು ದೆಹಲಿ ಪ್ರವಾಸ ಮಾಡಲಿದ್ದಾರೆ. ಈಗಾಗಲೇ 2- 3 ಸುತ್ತಿನ ಸಭೆ ನಡೆಸಿರುವ ಸಿಎಂ, ಡಿಸಿಎಂ. ರಾಜ್ಯ ನಾಯಕರು ಆಕಾಂಕ್ಷಿಗಳ ಹೆಸರು ಶಾರ್ಟ್ ಲಿಸ್ಟ್ ರೆಡಿಯಾಗಿದೆ. ಇದೇ ಲಿಸ್ಟ್ ಹಿಡಿದು ದೆಹಲಿಗೆ ತೆರಳಲಿರುವ ಸಿಎಂ, ಡಿಸಿಎಂ. ಅಭ್ಯರ್ಥಿಗಳ(Candidates) ಆಯ್ಕೆಗೆ ಗೆಲುವೊಂದೇ ಮಾನದಂಡ ಎಂದಿರುವ ಹೈಕಮಾಂಡ್. ಇಂದು ದೇಶಾದ್ಯಂತ 150 ಕ್ಷೇತ್ರಗಳ ಟಿಕೆಟ್(Ticket) ಘೋಷಣೆಗೆ ಪ್ಲ್ಯಾನ್ ಮಾಡಿದೆ. ರಾಜ್ಯದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಮೆಗಾ ಪ್ಲ್ಯಾನ್‌ನನ್ನು ಕಾಂಗ್ರೆಸ್ ಮಾಡಿದೆ. 10-13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯೇ ತಲೆ ನೋವಾಗಿದೆ. ಕೆಲ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ತೀವ್ರವಾದ ಪೈಪೋಟಿ ನಡೆಯುತ್ತಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ.
ಇದನ್ನೂ ವೀಕ್ಷಿಸಿ: ಹಲವು ಹಾಲಿ ಸಂಸದರಿಗೆ ತಪ್ಪುತ್ತಾ ಟಿಕೆಟ್..? ಕರಾವಳಿ ಭಾಗದ ಸಂಸದರಿಗೆ ಸಿಗುತ್ತಾ..? ಇಲ್ವಾ..?