ಹಲವು ಹಾಲಿ ಸಂಸದರಿಗೆ ತಪ್ಪುತ್ತಾ ಟಿಕೆಟ್..? ಕರಾವಳಿ ಭಾಗದ ಸಂಸದರಿಗೆ ಸಿಗುತ್ತಾ..? ಇಲ್ವಾ..?

ಅರುಣ್ ಪುತ್ತಿಲ ಬಂಡಾಯಕ್ಕೆ ಕಟೀಲ್ ಕಾರಣ ಎಂಬ ಆರೋಪ
ಕಟೀಲ್ ಕಾರಣಕ್ಕೆ ಪುತ್ತೂರಲ್ಲಿ ಬಿಜೆಪಿಗೆ ಸೋಲು ಎಂಬ ಆರೋಪ
ರಾಜ್ಯಾಧ್ಯಕ್ಷರಾದ ಅವಧಿಯಲ್ಲಿ ಮಂಗಳೂರಿನ ಅಭಿವೃದ್ಧಿ ಶೂನ್ಯ 

Share this Video
  • FB
  • Linkdin
  • Whatsapp

ಲೋಕಸಭೆ ಚುನಾವಣೆಗೆ ಬಿಜೆಪಿ(BJP) ಭರ್ಜರಿ ತಯಾರಿ ನಡೆಸುತ್ತಿದೆ. ಟಿಕೆಟ್(Ticket) ಹಂಚಿಕೆಯಲ್ಲಿ ಪಕ್ಷಗಳು ಬ್ಯುಸಿಯಾಗಿವೆ. ಪಟ್ಟಿ ತಯಾರಿಕೆಯ ಕೊನೆಯ ಹಂತದ ಸಿದ್ಧತೆಯಲ್ಲಿ ಬಿಜೆಪಿ ಇದೆ. ಈ ಬಾರಿ ಹಲವು ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್(Nalin Kumar Kateel), ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ(Anant Kumar Hegde), ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ(Shobha Karandlaje) ಟಿಕೆಟ್ ನೀಡಲು ವಿರೋಧ ವ್ಯಕ್ತವಾಗುತ್ತಿದೆ. ಮೂವರೂ ಸಂಸದರಿಗೆ ಟಿಕೆಟ್ ಕೊಡಲು ಕಾರ್ಯಕರ್ತರಲ್ಲೇ ವಿರೋಧವಿದೆ. ಹೊಸ ಮುಖಗಳಿಗೆ ಟಿಕೆಟ್ ನೀಡಿ ಎನ್ನುತ್ತಿರುವ ಕಾರ್ಯಕರ್ತರು. ಮೂವರಿಗೆ ಬಿಜೆಪಿ ಟಿಕೆಟ್ ಸಿಗುತ್ತಾ ಇಲ್ವಾ ಎಂಬ ಅನುಮಾನ ಹೆಚ್ಚಾಗಿದೆ.

ಇದನ್ನೂ ವೀಕ್ಷಿಸಿ: Katrina-Vicky Kaushal: ದೀಪಿಕಾ ಆಯ್ತು ಈಗ ತಾಯಿಯಾಗ್ತಿದ್ದಾರಾ ಕತ್ರಿನಾ..? ಬಾಲಿವುಡ್ ತುಂಬೆಲ್ಲಾ ಇದೇ ಗುಲ್ಲು..!

Related Video