BS Yediyurappa: ನಾಳೆ ಸಂಜೆ ಚುನಾವಣಾ ಮೀಟಿಂಗ್ ಇದ್ದು, ಟಿಕೆಟ್‌ ಹಂಚಿಕೆ ಬಹುತೇಕ ಅಂತಿಮವಾಗಲಿದೆ: ಬಿಎಸ್‌ವೈ

ಈಗಾಗಲೇ ಜೆ.ಪಿ.ನಡ್ಡಾ, ಅಮಿತ್ ಶಾ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ಆಗಿದೆ. ನಾಳೆ ಸಂಜೆ ಚುನಾವಣಾ ಮೀಟಿಂಗ್ ಇದ್ದು, ಬಹುತೇಕ ಅಂತಿಮವಾಗಲಿದೆ ಎಂದು ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಶಿವಮೊಗ್ಗ: ನಾಳೆ ದೆಹಲಿಗೆ ಹೋಗ್ತಿದ್ದೇನೆ. ನಾಳೆ ಸಂಜೆ ಚುನಾವಣಾ ಮೀಟಿಂಗ್ ಇದೆ. ಈ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಭಾಗವಹಿಸುತ್ತಾರೆ ಎಂದು ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ(B. S. Yediyurappa) ಹೇಳಿದ್ದಾರೆ. ಈಗಾಗಲೇ ಜೆ.ಪಿ.ನಡ್ಡಾ(JP Nadda) ಅಮಿತ್ ಶಾ (Amit Shah) ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ಆಗಿದೆ. ನಾಳೆ ಬಹುತೇಕ ಅಂತಿಮವಾಗಲಿದೆ. ಜೆಡಿಎಸ್ ಪಕ್ಷಕ್ಕೆ ಟಿಕೆಟ್(Ticket) ಹಂಚಿಕೆ ವಿಚಾರವಾಗಿ, ಯಾರು ಯಾರಿಗೆ ಯಾವುದು ಕೊಡ್ತಾರೆ ಗೊತ್ತಿಲ್ಲ. ಇನ್ನು ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ಬಹುತೇಕ ಅಂತಿಮ ಆಗಲಿದೆ. ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಸಂತೋಷ, ಅಭ್ಯರ್ಥಿ ಯಾರಾದರೂ ನಿಲ್ಲಲ್ಲೇಬೇಕಲ್ಲ. ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನೀಡಲ್ಲ ಎಂಬ ಆ ರೀತಿ‌ ಯಾವುದೇ ಚರ್ಚೆ ಇಲ್ಲ. ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Shobha Karandlaje: ನಮ್ಮ ಪಕ್ಷದ ಕೆಲವರಿಂದಲೇ ಟಿಕೆಟ್‌ ತಪ್ಪಿಸಲು ಷಡ್ಯಂತ್ರ: ಶೋಭಾ ಕರಂದ್ಲಾಜೆ

Related Video