ಸಿಎಂ ರಾಜೀನಾಮೆ: ನಡೆದು ಬಂದ ಹಾದಿ ನೆನೆದು ಯಡಿಯೂರಪ್ಪ ಭಾವುಕ
* ರಾಜೀನಾಮೆ ಪ್ರಹಸನಕ್ಕೆ ಇಂದು ಅಧಿಕೃತ ತೆರೆ
* ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷ
* ಸಾಧನಾ ಸಮಾವಶದಲ್ಲೇ ಭಾವುಕರಾದ ಯಡಿಯೂರಪ್ಪ
ಬೆಂಗಳೂರು(ಜು.26): ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಅವರು ಇಂದು(ಸೋಮವಾರ) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜೀನಾಮೆ ಪ್ರಹಸನಕ್ಕೆ ಇಂದು ಅಧಿಕೃತವಾಗಿ ಬ್ರೇಕ್ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷ ಸಂದಿವೆ. ಇಂದೇ ಬಿಎಸ್‌ವೈ ಸಿಎಂ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವಶದಲ್ಲೇ ರಾಜೀನಾಮೆ ಘೋಷಿಸಿದ್ದಾರೆ. ಸರ್ಕಾರ ಸುಗಮವಾಗಿ ನಡೆಯಲು ಕಾರಣರಾದ ಸಂಪುಟದ ಸಹೋದ್ಯೋಗಿಗಳಿಗೆ ಯಡಿಯುರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಬಿಎಸ್‌ವೈ ರಾಜೀನಾಮೆಗೂ ಮುನ್ನ ನಡೆದಿತ್ತು ಆ ನಾಲ್ವರು ನಾಯಕರ ನಿಗೂಢ ಸಭೆ!