ಕೇಂದ್ರ ಬಜೆಟ್ 2020: ಸಿಎಂ ಯಡಿಯೂರಪ್ಪ ಫಸ್ಟ್ ರಿಯಾಕ್ಷನ್

ಕೇಂದ್ರ ಬಜೆಟ್ ಜನಪರ ಬಜೆಟ್ ಆಗಿದ್ದು, ರೈತರಿಗೆ ವರದಾನವಾಗಲಿದೆ ಎಂದು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  

Share this Video
  • FB
  • Linkdin
  • Whatsapp

ಬೆಂಗಳೂರು, [ಫೆ.01]: ಕೇಂದ್ರ ಬಜೆಟ್ ಜನಪರ ಬಜೆಟ್ ಆಗಿದ್ದು, ರೈತರಿಗೆ ವರದಾನವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು ಟಿಂಕರಿಂಗ್ ಬಜೆಟ್ ಎಂದು ಹೆಸರಿಟ್ಟ ಸಿದ್ದರಾಮಯ್ಯ

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಣಕಾಸು ಸಚಿವೆ ಹಾಗೂ ಪ್ರಧಾನಿಗೆ ರಾಜ್ಯದ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಯಾವುದೇ ತೆರಿಗೆ ಭಾರ ಹಾಕದೆ ವಿನೂತನ ಬಜೆಟ್ ಮಂಡನೆ‌ ಮಾಡಲಾಗಿದೆ. ದೇಶದ ಇತಿಹಾಸದಲ್ಲೇ ಈ ಬಜೆಟ್ ನಲ್ಲಿ ರೈತರಿಗೆ, ಬಡವರಿಗೆ, ಗ್ರಾಮೀಣ ಜನರಿಗೆ ಸಾಕಷ್ಟು ಒತ್ತು ನೀಡಲಾಗಿದೆ. ರೈತರಿಗೆ ಈ ಬಜೆಟ್ ವರದಾನವಾಗಿದೆ ಎಂದು ಹೇಳಿದರು.

Related Video