
ಸಿದ್ದು, ಡಿಕೆಶಿ ಕೈ ಸೇರಿದ ಬೂತ್ ಕಮಿಟಿ ವರದಿ: ರಿಪೋರ್ಟ್ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ !
ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ನಿನ್ನೆ ಮತದಾನವಾಗಿದೆ. ಕಾಂಗ್ರೆಸ್‌ಗೆ ರಾಜ್ಯದ 224 ಕ್ಷೇತ್ರಗಳ ಬೂತ್ ಕಮಿಟಿ ರಿಪೋರ್ಟ್ ಸಿಕ್ಕಿದೆ. ಇದರ ಬಗ್ಗೆ ಈಗ ಸಿದ್ದರಾಮಯ್ಯ ಮನೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಎಲೆಕ್ಷನ್ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮೀಟಿಂಗ್ ನಡೆದಿದೆ. ಗರಿಷ್ಠ ಮಟ್ಟದ ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಬರಲಿದೆಯಂತೆ. ಈ ರಿಪೋರ್ಟ್‌ನನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಸಹ ತಲುಪಿಸಲಾಗಿದೆ. ಅಲ್ಲದೇ ಜಿಲ್ಲಾ ಕಮಿಟಿ ಈ ವರದಿಯನ್ನು ಸುರ್ಜೇವಾಲಾ ಅವರಿಗೆ ಕಳುಹಿಸಿದೆಯಂತೆ. ಇನ್ನೂ ಈ ರೀಪೋರ್ಟ್ ಪ್ರಕಾರ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಲಿದೆಯಂತೆ. ಬೆಂಗಳೂರು ನಗರದ ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮೇಲುಗೈ ಆಗುವ ಸಾಧ್ಯತೆ ಇದೆಯಂತೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಕರ್ನಾಟಕದಲ್ಲಿ ಈ ಬಾರಿ ಬಹುಮತ ಯಾರಿಗೆ.. 113ರ ಮ್ಯಾಜಿಕ್ ನಂಬರ್ ತಲುಪೋ ಪಕ್ಷ ಯಾವುದು..?