Asianet Suvarna News Asianet Suvarna News

ಕರ್ನಾಟಕದಲ್ಲಿ ಈ ಬಾರಿ ಬಹುಮತ ಯಾರಿಗೆ.. 113ರ ಮ್ಯಾಜಿಕ್ ನಂಬರ್ ತಲುಪೋ ಪಕ್ಷ ಯಾವುದು..?

ಕರ್ನಾಟಕ ಕುರುಕ್ಷೇತ್ರ ಗೆದ್ದು ರಾಜ್ಯ ಗದ್ದುಗೆ ಎರಿಯೇ ಸಿದ್ಧ ಅಂತ ಹೊರಟಿರುವ ಕಾಂಗ್ರೆಸ್‌ಗೆ ಮತಗಟ್ಟೆ ಸಮೀಕ್ಷೆಗಳಲ್ಲಿ ಶುಭ ಸುದ್ದಿ ಸಿಕ್ಕಿದೆ. ವಿಧಾನಸಭಾ ಚುನಾವಣೆಯ ಮತದಾನ ಅಂತ್ಯವಾಗ್ತಿದ್ದಂತೆ ಒಟ್ಟು 11 ಮತಗಟ್ಟೆ ಸಮೀಕ್ಷೆಗಳನ್ನು ನಡೆಸಲಾಗಿದೆ. 

ಕರ್ನಾಟಕ ಕುರುಕ್ಷೇತ್ರ ಗೆದ್ದು ರಾಜ್ಯ ಗದ್ದುಗೆ ಎರಿಯೇ ಸಿದ್ಧ ಅಂತ ಹೊರಟಿರುವ ಕಾಂಗ್ರೆಸ್‌ಗೆ ಮತಗಟ್ಟೆ ಸಮೀಕ್ಷೆಗಳಲ್ಲಿ ಶುಭ ಸುದ್ದಿ ಸಿಕ್ಕಿದೆ. ವಿಧಾನಸಭಾ ಚುನಾವಣೆಯ ಮತದಾನ ಅಂತ್ಯವಾಗ್ತಿದ್ದಂತೆ ಒಟ್ಟು 11 ಮತಗಟ್ಟೆ ಸಮೀಕ್ಷೆಗಳನ್ನು ನಡೆಸಲಾಗಿದೆ. ಈ 11 ಎಕ್ಸಿಟ್ ಪೋಲ್‌ಗಳ ಪೈಕಿ 8  ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದೆ. 3 ಮತಗಟ್ಟೆ ಸಮೀಕ್ಷೆಗಳು ಆಡಳಿತ ಪಕ್ಷ ಬಿಜೆಪಿಗೆ ಮುನ್ನಡೆ  ಅಂತ ಹೇಳುತ್ತಿವೆ. ಸಮೀಕ್ಷಾ ಸಂಸ್ಥೆಗಳಲ್ಲಿ ಪ್ರಮುಖವಾಗಿರೋ ಚಾಣಕ್ಯ ಸಂಸ್ಥೆ ಕರ್ನಾಟಕ ವಿಧಾನಸಭಾ ಚುನಾವಣೆಯ ತನ್ನ ಮತಗಟ್ಟೆ ಸಮೀಕ್ಷೆಯನ್ನು ಪ್ರಕಟಿಸಿದೆ. ಚಾಣಕ್ಯ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ 120 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಬಿಜೆಪಿ 92 ಸ್ಥಾನಗಳನ್ನು ಪಡೆಯಲಿದ್ದರೆ, ಜೆಡಿಎಸ್ ಕೇವಲ 12 ಸ್ಥಾನಗಳಿಗಷ್ಟೇ ತೃಪ್ತಿ ಪಡಲಿದೆ ಅಂತ ಚಾಣಕ್ಯ ಸಂಸ್ಥೆಯ ಮತಗಟ್ಟೆ ಸಮೀಕ್ಷೆ ಹೇಳುತ್ತಿದೆ.
ಇದೇ ವೇಳೆ ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಕೂಡ ಬಹಿರಂಗಗೊಂಡಿದ್ದು, ಕಾಂಗ್ರೆಸ್ 120ರಿಂದ 140 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಅಂತ ಈ ಸಮೀಕ್ಷೆ ಹೇಳುತ್ತಿದೆ. ಬಿಜೆಪಿ 62 ರಿಂದ 80 ಸ್ಥಾನಗಳಿಗೆ ಕುಸಿಯಲಿದ್ಯಂತೆ. ಜೆಡಿಎಸ್ 20ರಿಂದ 25 ಸ್ಥಾನಗಳನ್ನು ಗೆದ್ದರೆ, ಪಕ್ಷೇತರರು 3 ಸ್ಥಾನಗಳನ್ನು ಗೆಲ್ಲಬಹುದು ಅಂತ ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.
 

Video Top Stories