Asianet Suvarna News Asianet Suvarna News

ಬೆಳಗಾವಿ ಬಂಡಾಯ ಶಮನ: ನಾಯಕರ ಜೊತೆ ಬಿ.ಎಲ್. ಸಂತೋಷ್‌ ಸಭೆ

ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಬಂಡಾಯ 
ಬಂಡಾಯ ಶಮನಕ್ಕೆ ಬಿ.ಎಲ್.ಸಂತೋಷ್‌ ಎಂಟ್ರಿ
ಅತೃಪ್ತ ನಾಯಕರೊಂದಿಗೆ ಸಂತೋಷ್ ಸಭೆ

ಬೆಳಗಾವಿ: ಜಿಲ್ಲೆಯಲ್ಲಿನ ಬಂಡಾಯ ಶಮನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಂಟ್ರಿ ಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಬೆಳಗಾವಿ ಟಿಕೆಟ್‌ ಹಂಚಿಕೆ ಮಾಡಲಾಗಿತ್ತು. ಬಳಿಕ ಇಲ್ಲಿನ ಎಂಟು ಕ್ಷೇತ್ರದಲ್ಲಿ ನಾಯಕರು ಬಂಡಾಯ ಎದ್ದಿದ್ದರು. ಹಾಗಾಗಿ ಬೆಳಗಾವಿ ಜಿಲ್ಲಾ ನಾಯಕರ ಜೊತೆ ಬಿ.ಎಲ್‌. ಸಂತೋಷ್‌ ಮೀಟಿಂಗ್‌ ಮಾಡಿದ್ದಾರೆ. ಸಂಜಯ್‌ ಪಾಟೀಲ್‌, ಅನಿಲ್‌ ಬೆನಕೆ ಸೇರಿ ಹಲವು ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.ಈ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಸಂತೋಷ್ ಮುಂದಾಗಿದ್ದಾರೆ. ಇಲ್ಲಿತನಕ ಬಿಜೆಪಿ ಬೆಳಗಾವಿಯ 18 ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದ್ದು, ಇದರಲ್ಲಿ 6 ಹೊಸ ಮುಖಗಳಿಗೆ ಮಣೆಹಾಕಿದೆ. ಪ್ರಮುಖ ಪದಾಧಿಕಾರಿಗಳ ಜೊತೆಗೆ ಸಹ ಬಿ.ಎಲ್‌. ಸಂತೋಷ್‌ ಸಭೆ ನಡೆಸಿದ್ದಾರೆ. 

ಇದನ್ನೂ ಓದಿ: ಶಿಕಾರಿಪುರ ಜನ ನನಗೂ ಆಶೀರ್ವಾದ ಮಾಡುತ್ತಾರೆ: ವಿಜಯೇಂದ್ರ

Video Top Stories