ದೇವರಾಜು ಅರಸು ಕಾರ್ಯಕ್ರಮ: ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ

ಸಿದ್ದರಾಮಯ್ಯ , ಬಿಕೆ ಹರಿಪ್ರಸಾದ ಮಧ್ಯೆ ನಿಲ್ಲದ ಮುನಿಸು
ಬಹಿರಂಗ ಅಸಮಾಧಾನ ಹೊರಹಾಕಿದ್ದ ಬಿಕೆ ಹರಿಪ್ರಸಾದ್
ದೇವರಾಜು ಅರಸು ಕಾರ್ಯಕ್ರಮದಲ್ಲೂ ಇಬ್ಬರ ಫೈಟ್..!

Share this Video
  • FB
  • Linkdin
  • Whatsapp

ಬೆಂಗಳೂರು: ಮಾಜಿ ಸಿಎಂ ದೇವರಾಜು ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಬಿ.ಕೆ. ಹರಿಪ್ರಸಾದ್‌ (Hariprasad) ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾವೆಲ್ಲಾ ದೇವರಾಜು ಅರಸು(Devaraj Urs) ಕಾಲದಲ್ಲಿ ಬಂದವರು, ನಾವು ವಿರೋಧಿ ಬಣದಲ್ಲಿ ಇದ್ರೂ ಕರೆದು ಮಾತನಾಡಿಸುತ್ತಿದ್ರು. ನಮನ್ನ ರಕ್ಷಣೆ ಮಾಡುತ್ತಿದ್ದೇನೆ ಅಂತಾ ಅರಸು ಹೇಳುತ್ತಿದ್ರು ಎಂದು ಹರಿಪ್ರಸಾದ್ ಹೇಳಿದರು. ಈಗ ಕರೆದು ಮಾತನೋಡಲ್ಲ. ಶತ್ರುಗಳಂತೆ ನೋಡ್ತಾರೆ. ಹಿಂದುಳಿದ ವರ್ಗ ಅಂದ್ರೆ ಒಂದು ಜಾತಿಗೆ ಸಿಮೀತವಲ್ಲ. ಎಲ್ಲರನ್ನು ಜೊತೆಗೆ ಕರಕ್ಕೊಂಡು ಹೋಗಬೇಕು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ರು. ಸಿಎಂ ಕಾರ್ಯಕರ್ತರ ರಕ್ಷಣೆ ಮಾಡಬೇಕು..ಶತ್ರುಗಳಂತೆ ನೋಡಬಾರ್ದು. ಕಾರ್ಯಕರ್ತರ ರಕ್ಷಣೆ ಮಾಡದಿದ್ರೆ ಪಕ್ಷಕ್ಕೆ ಸಂಕಷ್ಟ ಬರಲಿದೆ ಎಂದು ಡಿ.ಕೆ ಶಿವಕುಮಾರ್ ಮುಂದೆಯೇ ಸಿಎಂ ವಿರುದ್ಧ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ರು. 

ಇದನ್ನೂ ವೀಕ್ಷಿಸಿ: ಎಣ್ಣೆ, ಗಾಂಜಾ ನಶೆಯಲ್ಲಿದ್ದವರಿಗೆ ಆಕೆ ಕಾಣಿಸಿದ್ದಳು: ಆಕೆಗೆ ಕಿರಾತಕರು ಮಾಡಿದ್ದೇನು ಗೊತ್ತಾ ?

Related Video