ಎಣ್ಣೆ, ಗಾಂಜಾ ನಶೆಯಲ್ಲಿದ್ದವರಿಗೆ ಆಕೆ ಕಾಣಿಸಿದ್ದಳು: ಆಕೆಗೆ ಕಿರಾತಕರು ಮಾಡಿದ್ದೇನು ಗೊತ್ತಾ ?

ಕ್ರಿಕೆಟ್ ಗ್ರೌಂಡ್‌ಗೆ ಬಂದವಳು ಮನೆಯ ದಾರಿ ಮರೆತಿದ್ದಳು..!
2 ವರ್ಷದ ಮಗು ಜೊತೆ ಹೋದವಳು ವಾಪಸ್ ಬರೆಲೇ ಇಲ್ಲ..!
ರಾತ್ರಿಯಿಡಿ ಹುಡುಕಾಡಿದವರಿಗೆ ಸಿಕ್ಕಿದ್ದು ಮಹಿಳೆಯ ಹೆಣ..!
 

Share this Video
  • FB
  • Linkdin
  • Whatsapp

ಅವಳು ಅರೆ ಬುದ್ಧಿ ಮಾಂದ್ಯ ಹೆಣ್ಣುಮಗಳು.. 4 ಗಂಟೆಗೆ ಒಮ್ಮೆ ಮಾತ್ರೆ ತಗೆದುಕೊಳ್ಳಲೇಬೇಕು. ಹೀಗಾಗಿ ಆಕೆ ಮನೆ ಬಿಟ್ಟು ಹೊರಗೆ ಹೋದವಳೇ ಅಲ್ಲ. ಆದ್ರೆ ಆವತ್ತು ಅದೇನಾಯ್ತೋ ಏನೋ.. ಅಕ್ಕನ ಮಗುವನ್ನ ಕರೆದುಕೊಂಡು ಸೀದಾ ಕ್ರಿಕೆಟ್ ಗ್ರೌಂಡ್‌ಗೆ ಹೋಗಿಬಿಟ್ಟಳು. ಹುಡುಗರು ಕ್ರಿಕೆಟ್ ಆಡೋದನ್ನ ನೋಡ್ತಾ ನೋಡ್ತಾ ಆಕೆಗೆ ತಾನು ಎಲ್ಲಿದ್ದೀನಿ ಅನ್ನೋದನ್ನೇ ಮರೆತುಬಿಟ್ಟಳು. ಆದ್ರೆ ಎಷ್ಟೇ ಹೊತ್ತಾದ್ರೂ ಮಗಳು ಮನೆಗೆ ಬರಲೇ ಇಲ್ವಲ್ಲ ಅಂತ ಆಕೆಯ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ರು. ಆದ್ರೆ ಏನೂ ಪ್ರಯೋಜನ ಆಗಲಿಲ್ಲ. ಆದ್ರೆ ಮಗು ಪೊದೆಯೊಂದರಲ್ಲಿ ಸಿಗ್ತು ಅಂತ ಸ್ಥಳಿಯರೇ ತಂದುಕೊಟ್ಟರು. ಆಕೆ ಮಾತ್ರ ಸಿಗಲೇ ಇಲ್ಲ.. ರಾತ್ರಿ ಕಳೆದು ಬೆಳಾಗಾಗ್ತಿದ್ದಂತೆ ಕಾಣೆಯಾದವಳು ಹೆಣವಾಗಿ ಸಿಕ್ಕಿದ್ಲು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ಕ್ಲೂ ಸಿಗಲಿಲ್ಲ.. ಆದ್ರೆ ಅವರಿಗೆ ಸುಳಿವು ಕೊಟ್ಟಿದ್ದು ಶ್ವಾನ. ಯಾವಾಗ ಶ್ವಾನ ಹೋಗಿ ಹರೀಶನ ಮನೆ ಮುಂದೆ ನಿಲ್ತೋ ಆಗಲೇ ಪೊಲೀಸರಿಗೆ ಅನುಮಾನ ಶುರುವಾಗಿತ್ತು. ಯಾಕಂದ್ರೆ ಆವತ್ತು ಮಗುವನ್ನ ಹುಡುಕಿ ತಂದವನು ಹರೀಶನೇ ಆಗಿದ್ದ. ಇದರ ಜೊತೆಗೆ ಪೊಲೀಸರಿಗೆ ಸಿಕ್ಕಿದ್ದ ಸಿಸಿಟಿವಿ ದೃಶ್ಯಗಳು ಹರೀಶ ಆ್ಯಂಡ್ ಟೀಂನ ಬೊಟ್ಟು ಮಾಡಿ ತೋರಿಸುತ್ತಿದ್ವು. ತಡಮಾಡದೇ ಹರೀಶ ಮತ್ತು ಇನ್ನಿಬ್ಬರನ್ನ ಪೊಲೀಸರು ಎತ್ತಾಕೊಂಡು ಬಂದು ವರ್ಕ್ ಮಾಡಿದ್ರು. ಆಗಲೇ ನೋಡಿ ಈ ಕೀಚಕರು ಬಾಯಿ ಬಿಡೋದು. ಬೆಂಗಳೂರು(bengaluru) ಸುತ್ತ ಮುತ್ತ ಅವರ ಹೆಸರಲ್ಲಿ ನಾನಾ ಕೇಸ್‌ಗಳಿವೆ.. ಆದ್ರೆ ಅಡ್ಡಾ ಅಂತ ಬಂದ್ರೆ ತಮ್ಮದೇ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶ ಫಿಕ್ಸ್.. ಆವತ್ತು ಹಾಗೆ ತಮ್ಮ ಅಡ್ಡಾದಲ್ಲಿ ಕೂತು ಎಣ್ಣೆ ಜೊತೆಗೆ ಗಾಂಜಾ ನಶೆ ಏರಿಸಿಕೊಳ್ಳೋ ಟೈಂನಲ್ಲೇ ಅವರಿಗೆ ಮುನಿರತ್ನಮ್ಮ ಕಣ್ಣಿಗೆ ಬಿದ್ದಿದ್ದಾಳೆ. ಗಾಂಜಾ ನಶೆಯಲ್ಲೇ ಆಕೆಯನ್ನ ಎಳೆದು ತಂದಿದ್ದಾರೆ. ಆಕೆ ಜೊತೆಗಿದ್ದ ಮಗುವಿಗೂ ಹಲ್ಲೇ ಮಾಡಿ ಬಿಸಾಕಿದ್ದಾರೆ. ಮುನಿರತ್ನಮ್ಮಳನ್ನ ಬೆದರಿಸಿ ಅತ್ಯಾಚಾರ(Rape) ಮಾಡಿದ್ದಾರೆ. ಕೊನೆಗೆ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ಅವಳನ್ನ ಕೊಂದುಬಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ: ಬಿಎಸ್‌ವೈ “ಧವಳಗಿರಿ”ವ್ಯೂಹ..ಹೇಗಿದೆ ಹುಲಿ ಹೆಜ್ಜೆ..? ರಾಜ್ಯ ಬಿಜೆಪಿಗೆ ಮತ್ತೆ ಅನಿವಾರ್ಯವಾದ್ರಾ ಯಡಿಯೂರಪ್ಪ..?

Related Video