Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಮೂಲ VS ವಲಸಿಗ ಫೈಟ್‌: ಹರಿಪ್ರಸಾದ್‌ ಮಾತಿಗೆ ಮೂಲ ಕಾಂಗ್ರೆಸ್ಸಿಗರ ಬೆಂಬಲ..!

ಕಾಂಗ್ರೆಸ್‌ನಲ್ಲಿ ಈಗ ಮೂಲ ವರ್ಸಸ್‌ ವಲಸಿಗ ಫೈಟ್‌ ಶುರುವಾಗಿದ್ದು, ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ಕೆಲವರು ಬೆಂಬಲ ನೀಡಿದ್ದಾರೆ.
 

ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ಮೂಲ ವರ್ಸಸ್‌ ವಲಸಿಗ ಫೈಟ್‌ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ(CM Siddaramaiah) ವಿರುದ್ಧ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ರೆಬೆಲ್‌ ಆಗಿದ್ದು, ಇತ್ತೀಚೆಗೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದರು. ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು ಎಂದು ಹರಿಪ್ರಸಾದ್‌ ಹೇಳಿದ್ದರು. ಇವರು ಹೈಕಮಾಂಡ್‌ ಮಟ್ಟದಲ್ಲಿ ವರ್ಚಸ್ಸನ್ನು ಹೊಂದಿದ್ದಾರೆ. ಇನ್ನೂ ಹರಿಪ್ರಸಾದ್‌ ಮಾತನಾಡಿದ ಬಳಿಕ ಕೆಲವರು ಅವರ ಸಪೋರ್ಟ್‌ಗೆ ಬಂದಿದ್ದಾರೆ. ಮೂಲ ಕಾಂಗ್ರೆಸ್ಸಿಗರು(Congress) ಅವರ ಮಾತಿಗೆ ಬೆಂಬಲ ನೀಡಿದ್ದಾರೆ. ಆದ್ರೆ ಇನ್ನೂ ಕೆಲವರು ಅವರು ಯಾವ ಅರ್ಥದಲ್ಲಿ ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.  

ಇದನ್ನೂ ವೀಕ್ಷಿಸಿ:  ರಾಜ್ಯ ಬಿಜೆಪಿಗೆ ಯಾರಾಗ್ತಾರೆ ನೂತನ ಸಾರಥಿ..?: ಅಭಿಪ್ರಾಯ ಸಂಗ್ರಹಿಸಿದ ಬಿ.ಎಲ್‌. ಸಂತೋಷ್‌