
ಮುಂದುವರೆದ 'ವಿಷಸರ್ಪ' ವಾರ್: ವಿಷಕಾರುವುದು ಬಿಜೆಪಿ ಹುಟ್ಟುಗುಣವೆಂದ ಬಿ.ಕೆ. ಹರಿಪ್ರಸಾದ್
ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡ ಹರಿಪ್ರಸಾದ್
ಬಿಜೆಪಿ ನಾಯಕರ ಹೇಳಿಕೆಗಳೇ ವಿಷಕಾರುವಂತಿವೆ
ಬಿಜೆಪಿ ನಾಯಕರ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ
ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ವಿಷ ಸರ್ಪದ ವಾರ್ ಮುಂದುವರೆದಿದೆ. ಬಿಜೆಪಿ ನಾಯಕರ ಹೇಳಿಕೆಗಳೇ ವಿಷಕಾರುವಂತಿವೆ ಎಂದು ಹೇಳುವ ಮೂಲಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ವಿಷ ಕಾರುವುದು ಬಿಜೆಪಿಯ ಹುಟ್ಟುಗುಣ, ಮಲ್ಲಿಕಾರ್ಜುನ ಖರ್ಗೆ ಹಳ್ಳಿ ಭಾಷೆಯಲ್ಲಿ ಹೇಳಿದ್ದಾರಷ್ಟೇ. ಈ ಮೂಲಕ ಖರ್ಗೆ ಹೇಳಿಕೆಯನ್ನು ಬಿ.ಕೆ. ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಆಯೋಗ ಅಮಿತ್ ಶಾ ರಾಜ್ಯಕ್ಕೆ ಬರುವುದಕ್ಕೆ ಕಡಿವಾಣ ಹಾಕಬೇಕು. ಏಕೆಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ, ಗಲಾಟೆಗಳು ನಡೆಯುತ್ತವೆ ಎಂದು ಅವರು ಹೇಳುತ್ತಾರೆ. ಈ ಮೂಲಕ ಅವರು ರಾಜ್ಯದಲ್ಲಿ ಅಶಾಂತಿಯನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಇದೆ ವೇಳೆ ಯತ್ನಾಳ್ ವಿರುದ್ಧವೂ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ರು.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಮೋದಿ ನಾಗರಹಾವು ಆದ್ರೆ, ಸೋನಿಯಾ ಗಾಂಧಿ ವಿಷಕನ್ಯೆನಾ?: ಯತ್ನಾಳ್