ಮೋದಿ ನಾಗರಹಾವು ಆದ್ರೆ, ಸೋನಿಯಾ ಗಾಂಧಿ ವಿಷಕನ್ಯೆನಾ?: ಯತ್ನಾಳ್‌

ಮೋದಿ ನಾಗರಹಾವು ಆದರೆ ಸೋನಿಯಾ ಗಾಂಧಿ ವಿಷಕನ್ಯೆನಾ? ಎಂದು ಬಸನಗೌಡ ಪಾಟೀಲ ಯತ್ನಾಳ್‌ ಕೊಪ್ಪಳದಲ್ಲಿ ಪ್ರಶ್ನೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಕೊಪ್ಪಳ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪದ ಹೇಳಿಕೆ ಬೆನ್ನಲೇ ಬಸನಗೌಡ ಪಾಟೀಲ ಯತ್ನಾಳ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೋದಿ ನಾಗರಹಾವು ಆದ್ರೆ, ಸೋನಿಯಾ ಗಾಂಧಿ ವಿಷಕನ್ಯೆನಾ ? ಎಂದು ಪ್ರಶ್ನಿಸಿದ್ದಾರೆ. ಸೋನಿಯಾ ಗಾಂಧಿ ಚೀನಾ, ಪಾಕಿಸ್ತಾನ ಏಜೆಂಟ್‌ ಆಗಿದ್ದಾರೆ. ರಾಹುಲ್‌ ಗಾಂಧಿ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಸಾಕ್ಷಿ ಕೇಳ್ತಾರೆ, ಅವರೊಬ್ಬ ಹುಚ್ಚ. ಸೋನಿಯಾ ಗಾಂಧಿ ವಿಷಕನ್ಯೆ ಎಂದು ಕೊಪ್ಪಳದಲ್ಲಿ ಪ್ರಚಾರ ಮಾಡುವಾಗ ಟೀಕೆ ಮಾಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ದೇಶದ ಪ್ರಧಾನಿಯನ್ನು ಹೇಗೆ ಮಾತನಾಡಿಸಬೇಕು ಎಂಬುದು ಗೊತ್ತಿಲ್ಲ. ಇವತ್ತು ಮೋದಿಯವರನ್ನು ಇಡೀ ಜಗತ್ತು ಒಪ್ಪಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ವೀಕ್ಷಿಸಿ: 'ಮೋದಿ ವಿಷ ಸರ್ಪ': ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಾಪ್‌ ಸಿಂಹ ಆಕ್ರೋಶ

Related Video