ಹುಬ್ಬಳ್ಳಿ ಬಿಜೆಪಿಯ ಭದ್ರಕೋಟೆ, ಲಕ್ಷ್ಮಣ ಸವದಿ ಸೋಲು ನಿಶ್ಚಿತ: ಅಮಿತ್ ಶಾ

ಬೆಳಗಾವಿಯಲ್ಲಿ ಅಮಿತ್ ಶಾ ಮತಬೇಟೆ ನಡೆಸಿದ್ದು, ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಹೆಚ್ಚಾಗಿದೆ ಎಂದು ಅವರು ಹೇಳಿದರು.

Share this Video
  • FB
  • Linkdin
  • Whatsapp

ಬೆಳಗಾವಿ: ಜಿಲ್ಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತಬೇಟೆ ನಡೆಸಿದ್ದಾರೆ. ಈ ವೇಳೆ ಅವರು ಮಾತನಾಡಿ, ನಾನು ಸಂಪೂರ್ಣ ಕರ್ನಾಟಕವನ್ನು ಸುತ್ತಿ ಅಂತಿಮವಾಗಿ ಬೆಳಗಾವಿಗೆ ಬಂದಿದ್ದೇನೆ. ಕರ್ನಾಟಕ ಜನ ಬಿಜೆಪಿಗೆ ಮತ ನೀಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಇನ್ನೂ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಹೆಚ್ಚಾಗಿದೆ. ನನಗೆ ನಂಬಿಕೆ ಇದ್ದು, ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದೆ ಎಂದು ಅಮಿತ್‌ ಶಾ ಹೇಳಿದರು. ಅಲ್ಲದೇ ನಾನು ಲಕ್ಷ್ಮಣ ಸವದಿ ಕ್ಷೇತ್ರಕ್ಕೂ ಹೋಗಿ ಬಂದಿದ್ದೇನೆ. ಆದ್ರೆ ಅಲ್ಲಿ ಖಂಡಿತವಾಗಿಯೂ ಬಿಜೆಪಿ ಗೆಲ್ಲಲಿದೆ. ಲಕ್ಷ್ಮಣ ಸವದಿ ಸೋಲಲಿದ್ದಾರೆ. ಕಾಂಗ್ರೆಸ್‌ ಮೊದಲಿನಿಂದಲೂ ತೃಷ್ಟಿಕರಣದ ರಾಜಕೀಯ ಮಾಡಿಕೊಂಡು ಬಂದಿದೆ. ಈ ಬಾರಿ ರಾಜ್ಯದ ಜನತೆ ಖಂಡಿತವಾಗಿಯೂ ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಎಂದು ಅಮಿತ್‌ ಶಾ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲಿ 3 ತಾಸಿನಲ್ಲಿ 26 ಕಿಲೋಮೀಟರ್‌ ರೋಡ್‌ ಶೋ ಮಾಡಿದ ಪ್ರಧಾನಿ ಮೋದಿ!

Related Video