ಬೆಂಗಳೂರಿನಲ್ಲಿ 3 ತಾಸಿನಲ್ಲಿ 26 ಕಿಲೋಮೀಟರ್ ರೋಡ್ ಶೋ ಮಾಡಿದ ಪ್ರಧಾನಿ ಮೋದಿ!
ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ 3 ಗಂಟೆಗಳಲ್ಲಿ 26 ಕಿಲೋಮೀಟರ್ ರೋಡ್ ಶೋ ಮಾಡಿದರು.
ಬೆಂಗಳೂರು (ಮೇ 06): ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಇಂದು ಪ್ರಧಾನಿ ಮೋದಿ ರೋಡ್ ಶೋ ಮಾಡಿದ್ದಾರೆ. ಇಡೀ ಬೆಂಗಳೂರು ಕೇಸರಿಮಯವಾಗಿತ್ತು. ಮೊದಲ ದಿನ ಬೆಂಗಳೂರಲ್ಲಿ ಕೇವಲ 3 ಗಂಟೆಗಳಲ್ಲಿ ಬರೋಬ್ಬರಿ 26 ಕಿ.ಮೀ ರೋಡ್ ಶೋ ನಡೆಸಿದ್ದಾರೆ. ಬೆಂಗಳೂರಿನ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನ ಸೋಮೇಶ್ವರ ಸಭಾಭವನದಿಂದ ತೆರೆದ ವಾಹನದಲ್ಲಿ ಮೋದಿ ರೋಡ್ ಶೋ, ಮಲ್ಲೇಶ್ವರದವರೆಗೆ ರೋಡ್ ಶೋ ಮಾಡಿ ಮುಕ್ತಾಯಗೊಳಿಸಿದರು. ಈ ವೇಳೆ ಪ್ರಧಾನಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಸಾಥ್ ನೀಡಿದ್ದಾರೆ. ಇನ್ನು ಮೋದಿ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ರಸ್ತೆಯದ್ದಕ್ಕೂ ಜನ ಸಾಗರವೇ ನೆರೆದಿತ್ತು. ರೋಡ್ ಶೋ ಉದ್ದಕ್ಕೂ ಮೋದಿ ಮೋದಿ ಘೋಷಣೆ ಕೇಳಿಬಂದಿತು.