Asianet Suvarna News Asianet Suvarna News

ಬಿಜೆಪಿ 10 ಶಾಸಕರ ಅಮಾನತು ಪ್ರಶ್ನಿಸಿ ಪ್ರತಿಭಟನೆ: ಜನರ ಬಳಿ ಹೋಗಲು ತೀರ್ಮಾನ

ಬಿಜೆಪಿಯ ಹತ್ತು ಶಾಸಕರ ಅಮಾನತನ್ನು ಖಂಡಿಸಿ ಕೇಸರಿ ಪಡೆ ಪ್ರತಿಭಟನೆ ನಡೆಸಲು ಮುಂದಾಗಿದೆ.
 

ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ. ಬಿಜೆಪಿಯ 10 ಶಾಸಕರನ್ನು (BJP MLAS Suspend) ಮಾಡಿರುವುದನ್ನು ಖಂಡಿಸಿ, ರಾಜ್ಯಾದ್ಯಂತ ಹೋರಾಟ(protest) ನಡೆಸಲು ಕೇಸರಿ ಪಡೆ ಸಿದ್ಧವಾಗುತ್ತಿದೆ. ಈ ಮೂಲಕ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ನಡೆಸಲು ಬಿಜೆಪಿ(BJP) ಸನ್ನದ್ಧವಾಗುತ್ತಿದೆ. ಫ್ರೀಡಂ ಪಾರ್ಕ್‌ನಲ್ಲಿ ಬಸವರಾಜ ಬೊಮ್ಮಾಯಿ(Basavaraja Bommai) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಇದರಲ್ಲಿ ಬಿಜೆಪಿ ಶಾಸಕರು, ವಿಧಾನಪರಿಷತ್‌ ಸದಸ್ಯರು ಭಾಗಿಯಾಗಲಿದ್ದಾರೆ. ಇನ್ನೂ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. 

ಇದನ್ನೂ ವೀಕ್ಷಿಸಿ:  ಕುಡಿಯುವ ನೀರೇ ಇಲ್ಲಿ ವಿಷ: ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಕರಾಳ ಸತ್ಯ ಬಯಲು

Video Top Stories