ಕುಡಿಯುವ ನೀರೇ ಇಲ್ಲಿ ವಿಷ: ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಕರಾಳ ಸತ್ಯ ಬಯಲು

ರಾಯಚೂರಿನ ಸುಮಾರು 10 ಹಳ್ಳಿಗಳ ಜನ ವಿಷಯುಕ್ತವಾದ ನೀರನ್ನೇ ಸೇವಿಸುತ್ತಿದ್ದಾರೆ. ಇದರಿಂದ ಅವರು ಹಲವು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ರಾಯಚೂರು: ಜಿಲ್ಲೆಯ ಹತ್ತು ಹಳ್ಳಿಗಳಲ್ಲಿ ಕುಡಿಯಲು ಬೇಕಾದ ನೀರೇ(Water) ಜನರ ಪಾಲಿಗೆ ವಿಷವಾಗಿದೆ. ಈ ವಿಷಯವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿಯಲ್ಲಿ ಬಯಲು ಮಾಡಿದೆ. ರಾಸಾಯನಿಕ ಮಿಶ್ರಿತವಾದ ನೀರನ್ನು(chemical mixed water) ಇಲ್ಲಿನ ಗ್ರಾಮಸ್ಥರು ಸೇವಿಸುತ್ತಿದ್ದಾರೆ. ವಿಷಪೂರಿತ ಫ್ಯಾಕ್ಟರಿ ನೀರು ಕೃಷ್ಣಾ ನದಿಗೆ ಸೇರುತ್ತಿದೆ. ಇದೇ ಕೆಮಿಕಲ್ ನೀರನ್ನು ರಾಯಚೂರಿನ(Raichur) ಜನ ಸೇವಿಸುತ್ತಿದ್ದಾರೆ. ಗಂಜಿಹಳ್ಳಿ, ಕೊರವಿಹಾಳ, ಹನುಮಾನ್‌ ದೊಡ್ಡಿಯಲ್ಲಿ ವಿಷಜಲವನ್ನು ಸೇವನೆ ಮಾಡಲಾಗುತ್ತಿದೆ. ಈ ನೀರನ್ನು ಸೇವಿಸಿ ಪ್ರತಿ ಮನೆಯಲ್ಲೂ ಜನ ಖಾಯಿಲೆಯಿಂದ ನರಳುತ್ತಿದ್ದಾರೆ. ನೀರನ್ನು ಸೇವಿಸಿ ಕ್ಯಾನ್ಸರ್‌, ಅಸ್ತಮಾ, ಥೈರಾಯ್ಡ್‌ ಖಾಯಿಲೆ ಬರುತ್ತಿದೆ. ಹೀಗಾಗಿ ಜನರ ದೂರು ಆಲಿಸಿ, ಕವರ್ ಸ್ಟೋರಿ ತಂಡ ತನಿಖೆಯನ್ನು ನಡೆಸಿತ್ತು.ಇದೀಗ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಸಂಸ್ಥೆಗಳು ವರದಿಯನ್ನು ನೀಡಿವೆ. 

ಇದನ್ನೂ ವೀಕ್ಷಿಸಿ: News Hour: ಬಗೆದಷ್ಟು ಬಯಲಾಗುತ್ತಿದೆ ಬೆಂಗಳೂರು ಉಗ್ರಜಾಲ!

Related Video