ಸಿದ್ದರಾಮಯ್ಯ ಸೋಲಿಗೆ ಕಾಂಗ್ರೆಸ್‌ನಲ್ಲೇ ಹುನ್ನಾರ: ಸ್ಫೋಟಕ ವಿಚಾರ ಬಿಚ್ಚಿಟ್ಟ ಶಾಸಕ!

ಸಿದ್ದರಾಮಯ್ಯನವರೇ ಕೋಲಾರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ರು, ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರು, ಘೋಷಣೆಗೂ ಮುನ್ನ ಬೇಡ ಅಂದಿದ್ರೆ ಸರಿಯಿತ್ತು, ಅವರೇ ಘೋಷಣೆ ಮಾಡಿದ ಬಳಿಕ ಬೇಡ ಅನ್ನೋದು ತಪ್ಪು: ರಾಜೂಗೌಡ

First Published Mar 19, 2023, 12:35 PM IST | Last Updated Mar 19, 2023, 12:35 PM IST

ಯಾದಗಿರಿ(ಮಾ.19):  ಸಿದ್ದರಾಮಯ್ಯರನ್ನ ಸೋಲಿಸಲು ಕಾಂಗ್ರೆಸ್‌ನಲ್ಲೇ ಹುನ್ನಾರ ನಡೆಯುತ್ತಿದೆ ಅಂತ ಬಿಜೆಪಿ ಶಾಸಕ ರಾಜೂಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ. ಸಿದ್ದರಾಮಯ್ಯ ಎಲ್ಲಾ ಪ್ಲಾನ್‌ ಹಾಕಿಕೊಂಡೇ ಕೋಲಾರಕ್ಕೆ ಹೋಗಿದ್ರು, ಅವರನ್ನ ಪಕ್ಷದವರೇ ಸೋಲಿಸಲು ಪ್ಲಾನ್‌ ಹಾಕ್ತಿರಬಹುದು. ಸಿದ್ದರಾಮಯ್ಯನವರೇ ಕೋಲಾರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ರು, ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರು, ಘೋಷಣೆಗೂ ಮುನ್ನ ಬೇಡ ಅಂದಿದ್ರೆ ಸರಿಯಿತ್ತು, ಅವರೇ ಘೋಷಣೆ ಮಾಡಿದ ಬಳಿಕ ಬೇಡ ಅನ್ನೋದು ತಪ್ಪು, ರಾಹುಲ್‌ ಗಾಂಧಿಗೆ ಮೆಸೇಜ್‌ ಕಳುಹಿಸಿ ಬೇಡ ಅನಿಸಿದ್ದಾರೆ ಅಂತ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾರ್ಚ್​ 25ಕ್ಕೆ ಪ್ರಧಾನಿ ಮೋದಿ ಮೆಗಾ ರೋಡ್ ಶೋ..!