ಬೆಂಗಳೂರಿನಲ್ಲಿ ಮಾರ್ಚ್​ 25ಕ್ಕೆ ಪ್ರಧಾನಿ ಮೋದಿ ಮೆಗಾ ರೋಡ್ ಶೋ..!

 ಮಾರ್ಚ್​ 25 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ವೈಟ್‌ಫೀಲ್ಡ್ ನಲ್ಲಿ 1 ಕಿಮೀ ವರೆಗೆ ಪ್ರಧಾನಿ ಮೆಗಾ ರೋಡ್ ಶೋ ನಡೆಸಲಿದ್ದಾರೆ.
 

First Published Mar 19, 2023, 11:46 AM IST | Last Updated Mar 19, 2023, 11:50 AM IST

ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರ ಬಿರುಸುಗೊಳಿಸಿದ್ದಾರೆ.  ಮಾರ್ಚ್‌ 25 ರಂದು ಮತ್ತೊಮ್ಮೆ ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ನೂತನ ಮೆಟ್ರೋ ವೈಟ್ ಫೀಲ್ಡ್, ಕೆ.ಆರ್ ಪುರದವರೆಗಿನ ಮಾರ್ಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹಾಗೇ  ರೋಡ್ ಶೋ ಮಾಡುವ ಮೂಲಕ ಮತದಾರರನ್ನು ಸೆಳೆಯಲಿದ್ದಾರೆ. ವೈಟ್‌ಫೀಲ್ಡ್ ನಲ್ಲಿ 1 ಕಿಮೀ ವರೆಗೆ ಪ್ರಧಾನಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮಹಾದೇವಪುರ ಕ್ಷೇತ್ರದ ಸತ್ಯಸಾಯಿ ಆಶ್ರಮದಿಂದ ವೈಟ್‌ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೆ ಮೋದಿ ರೋಡ್ ಶೋ ನಡೆಯಲಿದೆ.