Asianet Suvarna News Asianet Suvarna News

ಕಲ್ಯಾಣ ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ! ಕಮಲ ಪಡೆಗೆ ಕಲಬುರಗಿ ಪಾಲಿಕೆ ಚುಕ್ಕಾಣಿ

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಿದೆ. ನೂತನ ಮೇಯರ್ ಆಗಿ ವಿಶಾಲ್ ದರ್ಗಿ, ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.

ಕಲಬುರಗಿ (ಮಾ.23) : ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಿದೆ. ಪಾಲಿಕೆಯ ನೂತನ ಮೇಯರ್ ಆಗಿ ವಿಶಾಲ್ ದರ್ಗಿ ಹಾಗೂ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.
ಹಲವು ವರ್ಷಗಳಿಂದ ಕಲಬುರಗಿ ಪಾಲಿಕೆಯ ಚುಕ್ಕಾಣಿ ಹಿಡಿಯಬೇಕು ಎಂದು ಶ್ರಮಿಸುತ್ತಿದ್ ದಕ್ಷಿಣ ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ ಪ್ರಯತ್ನಕ್ಕೆ ಕಡೆಗೂ ಜಯ ಸಿಕ್ಕಂತಾಗಿದೆ. ರೇವೂರ ಅವರ ಬೆಂಬಲಿಗನಿಗೆ ಈಗ  ಮೇಯರ್ ಗಾದಿ ಒಲಿದುಬಂದಿದೆ. ಈ ಹಿಂದೆ ಶಾಸಕ ಚಂದ್ರಶೇಖರ್ ಪಾಟೀಲ್ ರೇವೂರ ಪ್ರಯತ್ನಕ್ಕೆ ಫಲ ಸಿಕ್ಕಿತ್ತು. ಈಗ ಅವರ ಮಗ ದತ್ತಾತ್ರೇಯ ಪಾಟೀಲ್ ರೇವೂರ (Dattatraya Patil Revoor) ಗೆ ಈ ಶ್ರೇಯಸ್ಸು ಸಲ್ಲಲಿದೆ. ಹನ್ನೆರಡು ವರ್ಷದ ಬಳಿಕ ಅಧಿಕಾರ ಸಿಕ್ಕ ಸಂಭ್ರಮದಲ್ಲಿರುವ ಬಿಜೆಪಿ ಕಾರ್ಯಕರ್ತರು. ಇಂದು ಟೌನ್ ಹಾಲ್ ಮುಂದೆ ಕಾರ್ಯಕರ್ತರ ವಿಜಯೋತ್ಸವ ಆಚರಿಸಿದರು.

ಇಂದು ಚುನಾವಣೆಗೆ ಹಾಜರಾದ 65  ಸದಸ್ಯರಲ್ಲಿ 33 ಮತ ಬಿಜೆಪಿಗೆ ಬಂದಿವೆ. ಇನ್ನು ಜೆಡಿಎಸ್ ಬೆಂಬಲ ಸಿಕ್ಕರೂ ಕೂಡ ಕಾಂಗ್ರೆಸ್ ಕೇವಲ 32 ಮತ ಗಳಿಸಲಷ್ಟೇ ಶಕ್ತವಾಗಿದ್ದು, ಮೇಯರ್‌ ಗಾದಿಗೆ ಏರುವಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಈ ಮೂಲಕ ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೂಡ ಹಿನ್ನಡೆ ಉಂಟುಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಮೇಯರ್‌ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆ ಎಂದೆನಿಸಿಕೊಳ್ಳುತ್ತಿದೆ.

ಕಳೆದ 2010 ರಲ್ಲಿ ಅಂದಿನ ಚಂದ್ರಶೇಖರ್(Chandrashekhar revooru) ನೇತೃತ್ವದಲ್ಲಿ ಮೊದಲ ಬಾರಿಗೆ ಮೇಯರ್ ಗಾದಿ ಏರಿದ್ದ ಬಿಜೆಪಿ. ಚಹಾ ಮಾರುವ ಮಹಿಳೆ ಸುನಂದಾ ಮೊದಲ ಬಾರಿಗೆ ಕೇಸರಿ ಪಕ್ಷದಿಂದ ಅಧಿಕಾರಕ್ಕೆರಿದ್ದರು ಆಗ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಅಲ್ಲಿಂದೀಚೆಗೆ ಬಿಜೆಪಿಗೆ ಅಧಿಕಾರ ಸಿಗದಂತೆ ನೋಡಿಕೊಂಡಿದ್ದ ಕಾಂಗ್ರೆಸ್. ಇದೀಗ ಹನ್ನೆರಡು ವರ್ಷ ವನವಾಸದ ಬಳಿಕೆ ಬಿಜೆಪಿ ತೆಕ್ಕೆಗೆ ಆಡಳಿತ ಚುಕ್ಕಾಣಿ ಸಿಕ್ಕಿದೆ.