ಪಂಚರಾಜ್ಯ ದಂಗಲ್ ಜೊತೆಗೆ ಲೋಕಸಭಾ ಚುನಾವಣೆ!?: ಅವಧಿಗೂ ಮುನ್ನವೇ ಸಂಭವಿಸುತ್ತಾ 'ಲೋಕ'ಸಂಗ್ರಾಮ..?
ಪಂಚರಾಜ್ಯ ಚುನಾವಣೆಗಳ ಮೇಲೆ ಕಾಂಗ್ರೆಸ್ ಕಣ್ಣು!
ಲೋಕ ಸಂಗ್ರಾಮ ಗೆಲ್ಲೋ ಮುನ್ನ ಪಂಚಾಗ್ನಿ ಪರೀಕ್ಷೆ!
ರಾಷ್ಟ್ರ ರಾಜಕಾರಣ ಬದಲಿಸಿತಾ ರಾಜ್ಯ ಚುನಾವಣೆ..?
ಈ ಬಾರಿಯ ಕರ್ನಾಟಕ ರಾಜ್ಯದ ಚುನಾವಣಾ ಫಲಿತಾಂಶ ಇದೆಯಲ್ಲಾ, ಇದು ನಿಜಕ್ಕೂ ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ ಚುನಾವಣೆಯಾಗಿದೆ. ಇವತ್ತು ಪ್ರತಿ ರಾಜ್ಯದ, ಪ್ರತಿಯೊಂದು ಪಕ್ಷವೂ ಸಹ, ಕರ್ನಾಟಕದಲ್ಲಿ ಏನಾಗಿದೆ ಅನ್ನೋದನ್ನ ನೋಡಿ ಪಾಠ ಕಲಿಯೋ ಹಂತಕ್ಕೆ ಬಂದಿದ್ದಾವೆ. ಅಂಥದ್ದೊಂದು ರಾಜಕೀಯ ಸುನಾಮಿ ಸೃಷ್ಟಿಸಿದೆ, ಕರ್ನಾಟಕ ಚುನಾವಣಾ ಫಲಿತಾಂಶ-2023.ಯಾವಾಗಲೂ ಗೆದ್ದೇ ಗೆಲ್ಲುತ್ತೇವೆ ಎಂಬ ಅಹಮಿಕೆಯಲ್ಲಿದ್ದ ಬಿಜೆಪಿ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿದೆ. ಬಿಜೆಪಿಯ ಪ್ರತಿಷ್ಠೆಗೆ ಪೆಟ್ಟು ನೀಡಿದೆ. ಅಟ್ ಎ ಸೇಮ್ ಟೈಮ್, ಸತತವಾಗಿ ಸೋತು ಸೋತು ಕಂಗೆಟ್ಟಿದ್ದ ಕಾಂಗ್ರೆಸ್ ಪಾರ್ಟಿಗೆ ದೊಡ್ಡದೊಂದು ಸಂದೇಶವನ್ನೂ ನೀಡಿದೆ. ಸರಿಯಾಗಿ ಫೈಟ್ ಕೊಟ್ರೆ, ನಾವು ಕೂಡ ಗೆಲ್ಲಬಹುದು ಅನ್ನೋ ಅರಿವು ಮೂಡಿಸಿದೆ. ಹಾಗಾಗಿನೇ ಮುಂದಿನ ಚುನಾವಣಾ ರಣಕಣ ಕಳೆಗಟ್ಟಿದೆ.
ಇದನ್ನೂ ವೀಕ್ಷಿಸಿ: ಅಯ್ಯೋ ದೇವರೆ..ಫುಲ್ ರಶ್..ರಶ್: ಡ್ರೈವರ್ ಸೀಟ್‌ನಿಂದಲೇ ಬಸ್ ಹತ್ತೋದಾ ಈ ಮಹಿಳೆ !