ರಣಕಣದಲ್ಲಿ ಮೂರು ಪಕ್ಷಗಳ ದಿಗ್ಗಜರ ಕ್ಯಾಂಪೇನ್‌ ಹವಾ: ಒಂದೇ ವಾರದಲ್ಲಿ ಇಡೀ ಕುರುಕ್ಷೇತ್ರವನ್ನೇ ಆವರಿಸಿದ ಮೋದಿ

ಬಿಜೆಪಿ ಅಭ್ಯರ್ಥಿಗಳ ಪರ ದಶ ದಿಕ್ಕುಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಮತಬೇಟಿ ನಡೆಸಿದ್ದಾರೆ. ಅವರು ಒಟ್ಟು 18 ಸಮಾವೇಶ, 6 ರೋಡ್‌ ಶೋಗಳನ್ನು ಮಾಡಿದ್ದಾರೆ.  

Share this Video
  • FB
  • Linkdin
  • Whatsapp

ಮೂರು ಪಕ್ಷಗಳ ದಿಗ್ಗಜ ನಾಯಕರು ವಿಧಾನಸಭಾ ಚುನಾವಣೆ ಹಿನ್ನೆಲೆ ಅಬ್ಬರದ ಪ್ರಚಾರ ಮಾಡಿದ್ದಾರೆ. ಆದ್ರೆ ಒಂದೇ ವಾರದಲ್ಲಿ ಇಡೀ ಕುರುಕ್ಷೇತ್ರವನ್ನು ಮೋದಿ ಆವರಿಸಿದ್ದು, ಕೇವಲ ಮೂರು ಪ್ರವಾಸದಿಂದ ಚುನಾವಣಾ ರಣಕಣದಲ್ಲಿ ಅಲೆಯನ್ನೇ ಎಬ್ಬಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ದಶ ದಿಕ್ಕುಗಳಿಂದಲೂ ಮತಬೇಟೆ ನಡೆಸಿದ್ದು, ರಾಜ್ಯಾದ್ಯಂತ 18 ಸಮಾವೇಶ, 6 ರೋಡ್ ಶೋ ಮಾಡಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಎರಡು ಹಂತದಲ್ಲಿ ರೋಡ್ ಶೋ ನಡೆಸಿ, ಮೋದಿ ಮತಬೇಟೆ ನಡೆಸಿದ್ದಾರೆ. ಹುಮ್ನಾಬಾದ್‌, ವಿಜಯಪುರ, ಕುಡುಚಿ, ಕೋಲಾರ, ಚನ್ನಪಟ್ಟಣ, ಬೇಲೂರು, ಚಿತ್ರದುರ್ಗ, ವಿಜಯನಗರ, ಸಿಂಧನೂರು, ಮೂಡಬಿದ್ರೆ, ಅಂಕೋಲಾ, ಬೈಲಹೊಂಗಲ, ಬಳ್ಳಾರಿ, ಬಾದಾಮಿ, ಶಿವಮೊಗ್ಗ ಗ್ರಾಮಾಂತರ, ತುಮಕೂರು, ಹಾವೇರಿ, ನಂಜನಗೂಡು ಸೇರಿದಂತೆ ಇನ್ನೂ ಇತರ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದಾರೆ. 

ಇದನ್ನೂ ವೀಕ್ಷಿಸಿ: BTM ಲೇಔಟ್‌ನಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಪೊಲೀಸ್‌ ಠಾಣೆಯಲ್ಲೇ ಪ್ರತಿಭಟನೆಗೆ ಕುಳಿತ ತೇಜಸ್ವಿ ಸೂರ್ಯ

Related Video